ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ: ವ್ಯಾಪಾರಿ ವ್ಯವಸಾಯಿ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ
ಮೊಗ್ರಾಲ್ ಪುತ್ತೂರು: ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿಯ ಮೊಗ್ರಾಲ್ ಪುತ್ತೂರು ಘಟಕ ಸಮಿತಿಯ ವತಿಯಿಂದ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಸಮಿತಿ ಜಿಲ್ಲಾ ಕಾರ್ಯದರ್ಶಿ ಶೋಭಾ ಬಾಲನ್, ಅಧ್ಯಕ್ಷ ಪಿ.ಕೆ. ಗೋಪಾಲನ್, ಜಿಲ್ಲಾ ಸಮಿತಿ ಸದಸ್ಯರಾದ ರಿಯಾಸ್ ಚೌಕಿ, ಪ್ರಕಾಶನ್ ಎನ್.ಬಿ, ಗೋಪಿ ಕುಂಬಳೆ, ವಿಜಯಚಂದ್ರನ್ ಕೆ.ಪಿ, ಸುಕುಮಾರನ್, ಸುರೇಶ್ ಟಿ.ಕೆ, ಜಾನಕಿ ಡಿ, ನೌಷಾದ್, ಅಬ್ದುಲ್ಲ, ಅಬ್ದುಲ್ ಸಲಾಂ, ಹಕೀಂ ಕಂಬಾರ್, ಅಬ್ದು ಕಾವುಗೋಳಿ, ಅಬ್ದುಲ್, ಆಸಾದ್, ಜಶೀರ್ ಸಹಿತ ಹಲವರು ಭಾಗವಹಿಸಿದರು.