ಎಲ್‌ಐಸಿ ಏಜೆಂಟ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಎಲ್‌ಐಸಿ ಏಜೆಂ ಟ್ ಓರ್ವರು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಸದುರ್ಗ ಅಳರಾಯಿ ನಿವಾಸಿ ಕೆ.ಕೆ. ವೀಟಿಲ್ ಪ್ರಸಾದ್ (43) ಸಾವನ್ನಪ್ಪಿದ ವ್ಯಕ್ತಿ. ಇವರು ಕಲ್ಲಂಚಿರಕ್ಕೆ ಸಮೀಪ ನಿನ್ನೆ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಮಲಾಕ್ಷನ್- ಕಮಲಾಕ್ಷಿ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಅನಿತ, ಮಗಳು ತೇಜಶ್ರೀ, ಸಹೋದರ ಕೃಷ್ಣಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page