ನವದೆಹಲಿ: ನವೆಂಬರ್ ತಿಂಗಳ ಮೊದಲ ದಿನವೇ ಜನತೆಗೆ ಬಿಗ್ ಶಾಕ್ ನೀಡಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೧೦೩ ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ೧೯ ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ೧೦೩ ರೂ.ನಂತೆ ಹೆಚ್ಚಿಸಲಾಗಿದೆ. ಕಳೆದ ೩೨ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ೩೧೦ ರೂ. ತನಕ ಏರಿಕೆ ಉಂಟಾಗಿದೆ.