ಎಸ್‌ಟಿಯುನಿಂದ 31ರಂದು ಕಲೆಕ್ಟರೇಟ್ ಧರಣಿ ಘೋಷಣಾ ಸಭೆ ನಾಳೆ
ವರ್ಕಾಡಿ: ನಿರ್ಮಾಣ ಕಾರ್ಮಿಕ ಸಂಘಟನೆ (ಎಸ್‌ಟಿಯು) ಜುಲೈ 31ರಂದು ನಡೆಸುವ ಕಲೆಕ್ಟರೇಟ್ ಧರಣಿಗೆ ಬೆಂಬಲ ಸೂಚಿಸಿ ಶಾಲಾ ಪ್ರತಿ ಭಟನೆ ಘೋಷಣೆ ಸಭೆ ಸಂಜೆ 4 ಗಂಟೆಗೆ ಆನೆಕಲ್ಲು ಶಾಖೆಯಲ್ಲಿ, ಪಾತೂರು ಶಾಖೆಯಲ್ಲಿ 5 ಗಂಟೆಗೆ (ಬಾಕ್ರಬೈಲು), ಧರ್ಮನಗರ ಶಾಖೆಯಲ್ಲಿ 6 ಗಂಟೆಗೆ (ಮಜೀರ್ಪಳ್ಳ), ಸಂಜೆ 7ಕ್ಕೆ ಪಾವೂರು ಶಾಖೆಯಲ್ಲಿ ಸಭೆ ನಡೆಯಲಿದೆ.
ಈ ಬಗ್ಗೆ ನಡೆದ ಐಯುಎಂಎಲ್ ಪದಾಧಿಕಾರಿಗಳ ಸಭೆಯಲ್ಲಿ ಕೆ. ಮೊಹಮ್ಮದ್ (ಪುತ್ತು) ಪಾವೂರು, ಅಧ್ಯಕ್ಷತೆ ವಹಿಸಿದ್ದರು. ಬಿ.ಎ. ಅಬ್ದುಲ್ ಮಜೀದ್ ಸ್ವಾಗತಿಸಿದರು. ಮೂಸ ಹಾಜಿ ತೋಕೆ, ಉಮ್ಮರಬ್ಬ ಆನೆಕಲ್ಲು, ಭಾವ ಹಾಜಿ ಸೂಪಿನಗರ, ವಿ.ಎಸ್. ಮೊಹಮ್ಮದ್, ಮೂಸ ಕೆದುಂಬಾಡಿ, ಅಹಮ್ಮದ್ ಕುಂಞಿ, ಕಜೆ, ಅಬೂಬಕ್ಕರ್ ಸಿದ್ದಿಕ್ ಬದಿಯೂರ್, ಇಬ್ರಾಹಿಂ ಕಜೆ, ಇಬ್ರಾಹಿಂ ಧರ್ಮನಗರ ಭಾಗವಹಿಸಿದ್ದರು.