ನೀರ್ಚಾಲು: ಏಣಿಯರ್ಪು ಲೈಫ್ ಹೌಸ್ ವಿಲ್ಲಾದ ೫೮ ಮನೆಗಳಿಗೆ ಜಿಲ್ಲಾಧಿಕಾರಿಯ ನಿರ್ದೇಶ ಪ್ರಕಾರ ದಾರಿ ಖಚಿತಪಡಿಸಲಾ ಯಿತು. ವರ್ಷಗಳ ಹಿಂದೆ ಸರಕಾರಿ ಸ್ಥಳವನ್ನು ಮಂಜೂರುಮಾಡಿ ಅದರಲ್ಲಿ ಮನೆ ನಿರ್ಮಿಸಿ ನೀಡುವು ದರೊಂದಿಗೆ ಸ್ಥಳ, ಮನೆಯಿಲ್ಲದ ಕುಟುಂಬಗಳು ಸಂತೋಷಪಟ್ಟಿದ್ದರು. ಆದರೆ ಹೆಚ್ಚು ಕಾಲವಾಗುವುದರೊಳಗೆ ಕಾಲನಿ ನಿವಾಸಿಗಳು ನಡೆದು ಹೋಗುತ್ತಿದ್ದ ದಾರಿಯನ್ನು ಕೆಲವು ವ್ಯಕ್ತಿಗಳು ತಮ್ಮದೆಂದು ತಿಳಿಸಿ ಸಂಚಾರಕ್ಕೆ ಅಡಚಣೆಯೊಡ್ಡಿದ್ದರು. ಇದರ ವಿರುದ್ಧ ಕಾಲನಿ ನಿವಾಸಿಗಳು ಸಿಪಿಎಂನ ನೇತೃತ್ವದಲ್ಲಿ ಬೇಳ ಗ್ರಾಮ ಕಚೇರಿಗೆ ಇತ್ತೀಚೆಗೆ ಮಾರ್ಚ್ ನಡೆಸಿದ್ದರು. ಕಾಲನಿ ನಿವಾಸಿಗಳಿಗೆ ನಡೆದು ಹೋಗಲು ದಾರಿಯಿಲ್ಲದಿರುವುದರ ಕುರಿತು ‘ಕಾರವಲ್’ ವರದಿ ಮಾಡಿತ್ತು. ಈ ವರದಿ ಗಮನಕ್ಕೆ ಬಂದ ಜಿಲ್ಲಾಧಿಕಾರಿ ಕಾಲನಿ ನಿವಾಸಿಗಳಿಗೆ ದಾರಿ ಸೌಕರ್ಯ ಒದಗಿಸಿಕೊಡುವಂತೆ ನಿರ್ದೇಶ ನೀಡಿದ್ದರು. ಇದರಂತೆ ಇತ್ತೀಚೆಗೆ ಅಧಿಕಾರಿಗಳು ಜೆಸಿಬಿ ಸಹಿತ ಕಾಲನಿಗೆ ತಲುಪಿ ದಾರಿ ಸೌಕರ್ಯ ಖಚಿತಪಡಿಸಿದ್ದಾರೆ.
