ಒಣಗಲು ಹಾಕಿದ್ದ ರಬ್ಬರ್ ಶೀಟ್ ಬೆಂಕಿಗಾಹುತಿ

ದೇಲಂಪಾಡಿ: ಇಲ್ಲಿಗೆ ಸಮೀಪದ ನೂಯಿಂವೀಡ್ ಎನ್.ಎ. ಯೂಸಫ್‌ರ ಮನೆ ಸಮೀಪದ ರಬ್ಬರ್ ಶೆಡ್‌ಗೆ ಬೆಂಕಿ ತಗಲಿ ಅಪಾರ ನಾಶ ಉಂಟಾಗಿದೆ.  ಇಲ್ಲಿ ಒಣಗಿಸಲು ಇಟ್ಟಿದ್ದ ೭೫ರಷ್ಟು ರಬ್ಬರ್ ಶೀಟ್ ಹಾಗೂ ಶೆಡ್‌ನ ಮಾಡು ಪೂರ್ಣವಾಗಿ ಹೊತ್ತಿ ಉರಿದಿದೆ. ಪರಿಸರದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಂಕಿ ತಗಲಿದ್ದು, ಸಮೀಪ ವಾಸಿಗಳು ಓಡಿ ಬಂದು ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಒಲೆಯಿಂದ ಬೆಂಕಿ ಹರಡಿರುವುದೋ ಅಥವಾ ಯಾರಾದರೂ ಕಿಚ್ಚಿರಿಸಿದ್ದೆ ಎಂಬ ಬಗ್ಗೆ ಸಂಶಯವಿದೆ ಎಂದು ಯೂಸಫ್ ತಿಳಿಸಿದ್ದಾರೆ. ಇಲ್ಲಿಂದ ನಾಲ್ಕು ದಿನದ ಹಿಂದೆ ಅಲ್ಯುಮೀನಿಯಂ ಪಾತ್ರೆ, ಸುಮಾರು ಇಪ್ಪತ್ತರಷ್ಟು ರಬ್ಬರ್ ಶೀಟ್ ಕಳವು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾರಾದರೂ ಕಿಚ್ಚಿರಿಸಿದ್ದೆ ಎಂಬ ಶಂಕೆ ಮೂಡಿದೆ.

You cannot copy contents of this page