ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ಕಾರಡ್ಕ ಶಾಲೆಯಲ್ಲಿ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ
ಮುಳ್ಳೇರಿಯ: ಕಾರಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಡಿ. ೫ರಿಂದ ೯ರವರೆಗೆ ನಡೆಯುವ ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಸ್ವಾಗತ ಸಮಿತಿ ಕಚೇರಿಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಕಲೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಕಾರಡ್ಕ ಶಾಲೆಯ ಎನ್ಸಿಸಿ ಕೆಡೆಟ್ಗಳು ಸಂರಕ್ಷಿಸುವ ಕಲೋತ್ಸವ ನೆನಪಿನ ಮರವನ್ನು ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು ನೆಟ್ಟರು.
ಇದೇ ವೇಳೆ ವಿವಿಧ ಸಮಿತಿಗಳ ಅವಲೋಕನಸಭೆ ಜರಗಿತು. ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಳ, ಎಂ. ರತ್ನಾಕರ, ಎನ್. ನಂದಿಕೇಶನ್, ಎನ್. ಕುಂಞಂಬು ನಾಯರ್, ರೂಪ ಸತ್ಯನ್, ಎ. ಪ್ರಸೀಜ, ಎ.ಕೆ. ಅಬ್ದುಲ್ ಖಾದರ್ ಹಾಜಿ, ಕೆ. ಸುರೇಶ್ ಕುಮಾರ್, ಗೀತಾ ತಂಬಾನ್, ಸುರೇಶ್ ಕುಮಾರ್, ಪ್ರಾಂಶುಪಾಲೆ ಮೀರಾ ಜೋಸ್, ಮುಖ್ಯೋಪಾಧ್ಯಾಯ ಎಂ. ಸಂಜೀವ ಮಾತನಾಡಿದರು. ಕಲೋತ್ಸವದ ಲಾಂಛನಕ್ಕೆ ಕಣ್ಣೂರು ಕೊಡಿಕುಂಡ್ ನಿವಾಸಿ ವಿ.ಪಿ. ಜ್ಯೋತಿಷ್ ಕುಮಾರ್ ರೂಪು ನೀಡಿದ್ದರು.