ಕಟ್ಟಡ ಮುರಿದು ತೆಗೆಯುತ್ತಿದ್ದಾಗ ಮೇಲ್ಛಾವಣಿ ಕುಸಿತ: ಇಬ್ಬರಿಗೆ ಗಾಯ
ಕಾಸರಗೋಡು: ಕಟ್ಟಡ ಮುರಿದು ತೆಗೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದು ತಮಿಳುನಾಡು ನಿವಾಸಿಗಳಾದ ಇಬ್ಬರು ಕಾರ್ಮಿಕರು ಗಾಯಗೊಂಡರು. ತಾಯಲಂಗಾಡಿ ಯಲ್ಲಿ ಹಳೆಯ ಕಟ್ಟಡ ಮುರಿಯುತ್ತಿ ದ್ದಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ. ತಮಿಳುನಾಡು ಸೇಲಂ ತಲಕುರಿಚ್ಚಿ ನಿವಾಸಿಗಳಾದ ಜಾನ್ ಅಲೆಕ್ಸಾಂಡರ್ (37), ಇಬ್ರಾಹಿಂ (25) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛಾವಣಿ ಕುಸಿದಾಗ ಕಲ್ಲುಗಳೆಡೆ ಯಲ್ಲಿ ಸಿಲುಕಿದ ಕಾರ್ಮಿಕರನ್ನು ಕಾಸರಗೋಡು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷಿಸಿದ್ದಾರೆ.