ಕಡಂಬಾರು ಪರಿಸರ ರಸ್ತೆಯಲ್ಲಿ ತ್ಯಾಜ್ಯ ರಾಶಿ: ದುರ್ವಾಸನೆಯಿಂದ ಸಂಚಾರ ಸಮಸ್ಯೆ

ಮಂಜೇಶ್ವರ: ಹೊಸಂಗಡಿ- ಆನೆಕಲ್ಲು ಲೋಕೋಪಯೋಗಿ ಇಲಾಖೆಯ ದುರ್ಗಿಪಳ್ಳ, ಕಡಂ ಬಾರು ಪರಿಸರದ ರಸ್ತೆ ಬದಿಯ ಅಲ್ಲಲ್ಲಿ ತ್ಯಾಜ್ಯ ರಾಶಿಗಳು ಕಂಡು ಬರುತ್ತಿದ್ದು, ಮಳೆಗೆ ಕೊಳೆತು ದುರ್ವಾಸನೆ ಬೀರುತ್ತಿದ್ದು, ಈ ಭಾಗದಲ್ಲಿ ಸಂಚಾರ ಸಮಸ್ಯೆಯಾ ಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿದೆ. ಕಡಂಬಾರು ತಿರುವುನಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದೆ. ಮಂಜೇಶ್ವರ ಹಾಗೂ ಮೀಂಜ ಪಂಚಾಯತ್ ಸಂಗಮಿಸುವ ಪ್ರದೇಶ ಇದಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ಹಿಂದೆ ಕಡಂಬಾರಿನಲ್ಲಿ ಸಿಸಿ ಕ್ಯಾಮರಾವನ್ನು ಸ್ಥಾಪಿಸಲಾಗಿತ್ತು. ಬಳಿಕ ಅಲ್ಲಿ ತ್ಯಾಜ್ಯ ಉಪೇಕ್ಷಿಸುವುದು ಕಡಿಮೆಯಾಗಿದೆ. ಆದರೆ ಈಗ ಸಿಸಿ ಇಲ್ಲದ ಕಡೆಗಳಲ್ಲಿ ತ್ಯಾಜ್ಯ ಉಪೇಕ್ಷಿಸಲಾಗು ತ್ತಿರುವು ದಾಗಿ ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page