ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆಯಿಂದ
ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ, ಶ್ರೀ ಮಹಾಗಣಪತಿ, ಶ್ರೀ ವನಶಾಸ್ತಾರ ದೇವರುಗಳ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ನಾಗದೇವರು, ವ್ಯಾಘ್ರ ಚಾಮುಂಡಿ, ಗುಳಿಗ ದೈವಗಳ ಪುನಃ ಪ್ರತಿಷ್ಠೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಾಳೆ ಆರಂಭಗೊಂಡು ಫೆ. ೨೪ರವರೆಗೆ ಜರಗಲಿದೆ. ಕ್ಷೇತ್ರದ ವರ್ಷಾವಧಿ ಜಾತ್ರೆ ೨೫ರಿಂದ ೨೯ರವರೆಗೆ ಜರಗಲಿದೆ.
ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಮಧ್ಯಾಹ್ನ ೧೨.೩೦ಕ್ಕೆ ಅನ್ನದಾಸೋಹಂ, ಸಂಜೆ ೫.೩೦ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ, ೬ಕ್ಕೆ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕುಂಬಳೆ ಕೃಷ್ಣನಗರದಿಂದ ಹೊರಡಲಿದೆ. ೬.೧೫ಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಉಪಸ್ಥಿತರಿ ರುವರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲನೆ ನಡೆಸುವರು. ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಅಡಿಗ, ಕಾರ್ಯನಿರ್ವಹಣಾ ಧಿಕಾರಿ ಸುನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ರುವರು. ಜೀರ್ಣೋದ್ಧಾರ ಕಾಮಗಾರಿ ಯಲ್ಲಿ ಸಹಕರಿಸಿದ ಮೇಸ್ತ್ರಿ, ಬಡಗಿ ಇತ್ಯಾದಿ ಕಾರ್ಯಕರ್ತರಿಗೆ ಗೌರವಾ ರ್ಪಣೆ ನಡೆಯಲಿದೆ. ರಾತ್ರಿ ೮ಕ್ಕೆ ಹಸಿರು ಹೊರೆಕಾಣಿಕೆಯ ಶೋಭಾ ಯಾತ್ರೆ ಪ್ರವೇಶ, ಸ್ವಾಗತ, ಸಮರ್ಪಣೆ, ೮.೩೦ಕ್ಕೆ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಸಾಮೂಹಿಕ ಭಜನೆ, ೯ಕ್ಕೆ ಕಣಿಪುರ ಜಿ.ಕೆ. ಟೈಗರ್ಸ್‌ನಿಂದ ಹುಲಿಕುಣಿತ ನಡೆಯಲಿದೆ. ಅನಂತರದ ದಿನಗಳಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸ್ವಾಮೀಜಿಗಳು, ಗಣ್ಯರು ಸಹಿತ ಹಲವರು ಭಾಗವಹಿಸುವರು. ಪ್ರತಿದಿನ ಸಾಂಸ್ಕೃತಿಕ ಕಾರ್ಯ ವಲಯಗಳು ಒಳ ವೇದಿಕೆ ಹಾಗೂ ಹೊರ ವೇದಿಕೆಗಳಲ್ಲಿ ಜರಗಲಿದೆ.