ಕನ್ನಡಿಗರ ಹಕ್ಕು ಸಂರಕ್ಷಣೆಗೆ ಕರ್ನಾಟಕ ಸಮಿತಿಯಿಂದ ಮನವಿ

ಕಾಸರಗೋಡು: ಕನ್ನಡಿಗರ ಹಕ್ಕನ್ನು ಸಂರಕ್ಷಿಸಬೇಕು, ಕನ್ನಡಿಗ ಉದ್ಯೋಗ ಮೀಸಲಾತಿ ಇಲ್ಲದಾಗಿಸಲು ನಡೆಸುವ ಹುನ್ನಾರ ಕೊನೆಗೊಳಿಸಬೇಕು, ಕನ್ನಡ ಪ್ರದೇಶದ ಅಂಗನವಾಡಿಗಳಲ್ಲಿ ಕನ್ನಡ ಅಧ್ಯಾಪಿಕೆಯರನ್ನು ನೇಮಿಸಬೇಕು, ಕನ್ನಡ ಅರ್ಜಿಗಳಿಗೆ ಕನ್ನಡದಲ್ಲೇ ಉತ್ತರ ನೀಡುವ ಅವಕಾಶ ಕಲ್ಪಿಸಬೇಕು, ಮೊದಲಾದ 21 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಕರ್ನಾಟಕ ಸಮಿತಿ ನೇತೃತ್ವದಲ್ಲಿ ಜಿಲ್ಲಾ ದಂಡನಾಧಿ ಕಾರಿಯವರಿಗೆ ನೀಡಲಾಯಿತು. ಈ ವೇಳೆ ಕರ್ನಾಟಕ ಸಮಿತಿ ಅಧ್ಯಕ್ಷ ಕೆ.ಎನ್. ಬಳ್ಳಕ್ಕುರಾಯ, ಕ.ಸಾ.ಪ ಗಡಿ ನಾಡ ಘಟಕ ಅಧ್ಯಕ್ಷ ಜಯಪ್ರಕಾಶ್ ತೊಟ್ಟೆತ್ತೋಡಿ, ಗಮಕ ಕಲಾ ಪರಿಷತ್ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಸತ್ಯನಾರಾಯಣ ತಂತ್ರಿ ಉಪ ಸ್ಥಿತರಿದ್ದರು.

You cannot copy contents of this page