ಕನ್ಯಪ್ಪಾಡಿ-ಪಳ್ಳ ರಸ್ತೆ ಶೋಚನೀಯಾವಸ್ಥೆ ಪ್ರತಿಭಟಿಸಿ ಯೂತ್ ಕಾಂಗ್ರೆಸ್‌ನಿಂದ ಚಳವಳಿ

ಪೆರ್ಲ: ಕನ್ಯಪ್ಪಾಡಿಯಿಂದ ಪಳ್ಳವರೆಗಿನ ಜಿಲ್ಲಾ ಪಂಚಾಯತ್ ರಸ್ತೆ ಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದನ್ನು  ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಎಣ್ಮಕಜೆ ಹಾಗೂ ಬದಿಯಡ್ಕ ಮಂಡಲ ಸಮಿತಿಗಳ ಸಂಯುಕ್ತ ನೇತೃತ್ವದಲ್ಲಿ ಚೆನ್ನೆಗುಳಿಯಲ್ಲಿ  ನಿನ್ನೆ ರಸ್ತೆಯ ಹೊಂಡದಲ್ಲಿ ದೋಣಿ ಇಳಿಸಿ ವಿನೂತನ ರೀತಿಯ ಚಳವಳಿ ನಡೆಸಲಾಯಿತು.  ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಚಳವಳಿ ಯನ್ನು ಉದ್ಘಾಟಿಸಿ ಮಾತನಾಡಿ, ಈ ರಸ್ತೆಗೆ  ಕಳೆದ ಐದು ವರ್ಷಗಳಿಂದ ಎಡರಂಗ ಆಡಳಿತ ನಡೆಸುವ ಜಿಲ್ಲಾ ಪಂಚಾಯತ್  ಒಂದು ರೂಪಾಯಿ ಕೂಡಾ ಮೀಸಲಿರಿಸಿಲ್ಲ ವೆಂದು  ಮಾಹಿತಿ ಹಕ್ಕು ಕಾಯ್ದೆ  ಪ್ರಕಾರ ತಿಳಿದುಬಂದಿದೆ.  ಆದ್ದರಿಂದ ಈ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಲು ಜಿಲ್ಲಾ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದು ಇದರಿಂದ ಸ್ಪಷ್ಟಗೊಳ್ಳುತ್ತಿದೆ. ಡಿಪಿಸಿ ಕ್ರಮಕ್ಕೆ ಮುಂದಾಗುವುದಾದಲ್ಲಿ ಎಣ್ಮಕಜೆ ಪಂಚಾಯತ್‌ನ ಟೋಕನ್ ಫಂಡ್ ಕೂಡಾ ಮಂಜೂರು ಮಾಡುವುದಾಗಿ ಅವರು ತಿಳಿಸಿದರು. ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ವಿವಿಧ ಮನವಿಗಳನ್ನು ಸಲ್ಲಿಸಿದರೂ ರಸ್ತೆ ಅಭಿವೃದ್ಧಿಗೆ ಯಾವುದೇ  ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.  ಎಣ್ಮಕಜೆ ಪಂಚಾಯತ್ ಭರವಸೆ ನೀಡಿದ ಟೋಕನ್ ಫಂಡ್ ಬದಿಯಡ್ಕ ಗ್ರಾಮ ಪಂಚಾಯತ್ ಕೂಡಾ ಈ ರಸ್ತೆ ಸಂಚಾರಯೋಗ್ಯಗೊಳಿ ಸುವುದಾದಲ್ಲಿ ಜಿಲ್ಲಾ ಪಂಚಾಯತ್‌ಗೆ ನೀಡುವುದಾಗಿ ತಿಳಿಸಿದರು. ಮುಸ್ಲಿಂ ಲೀಗ್  ಮಂಜೇ ಶ್ವರ ವಿಧಾನಸಭಾ ಕ್ಷೇತ್ರ ಸಹ ಕಾರ್ಯ ದರ್ಶಿ ಸಿದ್ದಿಕ್ ವಳಮೊಗರು ಮಾತ ನಾಡಿ, ಎಡರಂಗದ ನಿರ್ಲಕ್ಷ್ಯ ನೀತಿಗೆ ಈ ರಸ್ತೆಯ ಶೋಚನೀಯಾವಸ್ಥೆ ಉದಾ ಹರಣೆಯಾಗಿದೆಯೆಂದು ಆರೋಪಿಸಿ ದರು. ಎಣ್ಮಕಜೆ ಪಂಚಾಯತ್ ಸದಸ್ಯೆ  ಝರೀನಾ ಮುಸ್ತಫ, ಹಿರಿಯ ಕಾಂಗ್ರೆಸ್ ನೇತಾರ ಕುಂಜಾರು ಮೊಹಮ್ಮದ್ ಹಾಜಿ, ಐಎನ್‌ಟಿಯುಸಿ  ಜಿಲ್ಲಾ ಸಮಿತಿ ಪದಾಧಿಕಾರಿ ಖಮರುದ್ದೀನ್ ಪಾಡಲಡ್ಕ, ಅಶೋಕ್ ನೀರ್ಚಾಲು ಮೊದಲಾದವರು ಮಾತನಾಡಿದರು. ಯೂತ್  ಕಾಂಗ್ರೆಸ್ ಎಣ್ಮಕಜೆ ಮಂಡಲ ಅಧ್ಯಕ್ಷ  ಫಾರೂಕ್ ಪಿ.ಎಂ ಅಧ್ಯಕ್ಷತೆ ವಹಿಸಿದರು. ಯೂತ್ ಕಾಂಗ್ರೆಸ್  ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶ್ರೀನಾಥ್ ಎ ನಾಯರ್ ಸ್ವಾಗತಿಸಿ, ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ಎಚ್, ಆರಿಸ್ ಶೇಣಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page