ಕರ್ನಾಟಕ ಪ್ಯಾಕೆಟ್ ಮದ್ಯ ಸಹಿತ ಸ್ಕೂಟರ್ ವಶ
ಕಾಸರಗೋಡು: ಕಾಸರಗೋಡು ತಳಂಗರೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ದಾಳಿಯಲ್ಲಿ 14.94 ಲೀಟರ್ (180 ಎಂಎಲ್ನ 83 ಪ್ಯಾಕೆಟ್ ಕರ್ನಾಟಕ ಮದ್ಯ) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮಾಲು ಸಾಗಿಸುತ್ತಿದ್ದ ಸ್ಕೂಟರ್ನ್ನು ತಂಡ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ತೆರುವತ್ತ್ನ ಅಬ್ದುಲ್ ಬಷೀರ್ ಖಾನ್ (56) ಎಂಬಾತನನ್ನು ಬಂಧಿಸಲಾಗಿದೆ. ಎಕ್ಸೈಸ್ ಅಸಿಸ್ಟೆಂಟ್ ಇನ್ಸ್ಪೆಕ್ಟರ್ (ಗ್ರೇಡ್) ಕೆ.ವಿ.ಮುರಳಿ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ನೌಶಾದ್ ಕೆ, ಅಜೀಶ್, ಸಿಇಒಗಳಾದ ಮಂಜುನಾಥನ್ ಮತ್ತು ಚಾಲಕ ಸಜೀಶ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.