ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ
ಕುಂಬಳೆ: ಕೊಯಿಪ್ಪಾಡಿ ಗ್ರಾಮ ದ ಕುಂಟಂಗೇರಡ್ಕದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 3.6 ಲೀಟರ್ ಕರ್ನಾ ಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶ ಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶಾಂತಿಪಳ್ಳದ ಮನೋಜ್ ಕುಮಾರ್ ಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದೆ.ಗುಪ್ತಚರ ವಿಭಾಗಕ್ಕೆ ಲಭಿಸಿದ ಗುಪ್ತ ಮಾಹಿತಿಯಂತೆ ಕುಂಬಳೆ ಎಕ್ಸೈಸ್ ರೇಂಜ್ನ ಪ್ರಿವೆಂಟೀವ್ ಆಫೀಸರ್ ಮೊಯ್ದೀನ್ ಸಾದಿಕ್ ನೇತೃತ್ವದ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಪ್ರಜಿತ್ ಪಿ, ಸುಬಿನ್ ಪಿಲಿಫ್, ಧನೇಶ್ ಎಂ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ