ಕಲಾವಿದರ ಸಂಗಮ: ನಾಟಕೋತ್ಸವ 23ರಿಂದ

ಕಾಸರಗೋಡು: ಕಲಾವಿದರ ಸಂಗಮ ಮತ್ತು ನಾಟಕೋತ್ಸವ ಈ ತಿಂಗಳ 23, 24ರಂದು ಅಪರಾಹ್ನ 3 ಗಂಟೆಗೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯಲಿದೆ. 23ರಂದು ಅಪರಾಹ್ನ ೩ ಗಂಟೆಗೆ ಮಂಜೇಶ್ವರ ಕಾಸರಗೋಡು ವಲಯಗಳ ಕಲಾವಿದರ ಸಂಗಮ ನಡೆಯಲಿದೆ. ಸಿನಿಮಾ ನಟ ಸಂತೋಷ್ ಕೀಳಟ್ಟೂರ್ ಉದ್ಘಾಟಿಸುವರು. ಕಾಸರಗೋಡಿನ ನಾಟಕ ಚರಿತ್ರೆ ಸಿದ್ಧಾಂತದ ಆರಂಭದ ಚರ್ಚೆ, ಕಲಾವಿದರ ಡಾಟಾ ಎಂಟ್ರಿ ಸಂಗ್ರಹ ಮತ್ತು ರಂಗ ಚಟುವಟಿಕೆಗಳು ಮುಂತಾದ ವಿಷಯಗಳ ಬಗ್ಗೆ ಅವಲೋಕನ ನಡೆಯಲಿದೆ. ಸಂಜೆ ೬ ಗಂಟೆಗೆ ನಾಟಕೋತ್ಸವದ ಉದ್ಘಾಟನೆಯನ್ನು ಅಕಾಡೆಮಿ ಅಧ್ಯಕ್ಷ ಮಟ್ಟನ್ನೂರು ಶಂಕರನ್ ಕುಟ್ಟಿ ನೆರವೇರಿಸುವರು. ಕಾರ್ಯದರ್ಶಿ ಕರಿವೆಳ್ಳೂರ್ ಮುರಳಿ, ಇ.ಪಿ. ರಾಜಗೋಪಾಲನ್, ರಾಮಮೋಹನ್ ನೀಲೇಶ್ವರ ಭಾಗವಹಿಸುವರು. ೬.೩೦ಕ್ಕೆ ಹುಲಗಪ್ಪ ಕಟ್ಟಿಮನಿ ನಿರ್ದೇಶನದ ‘ಜೊತೆಗಿರುವನು ಚಂದಿರ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

You cannot copy contents of this page