ಕಲೆಕ್ಟರೇಟ್‌ನಲ್ಲಿ ಮಹಿಳಾ ಆಯೋಗದ ಅದಾಲತ್: ೭ ದೂರುಗಳಿಗೆ ಪರಿಹಾರ

ಕಾಸರಗೋಡು: ಕಲೆಕ್ಟರೇಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಅದಾಲತ್‌ನಲ್ಲಿ ೨೭ ದೂರುಗಳನ್ನು ಪರಿಗಣಿಸಲಾಗಿದೆ. ಮಹಿಳಾ ಆಯೋಗದ   ನ್ಯಾಯವಾದಿ ಎ. ಕುಂಞಾಯಿಸ ಭಾಗವಹಿಸಿದ್ದರು. ೨೭ ದೂರುಗಳಲ್ಲಿ ೭ ದೂರಿಗೆ ಮುಂದಿನ ಅದಾಲತ್‌ಗೆ ಮುಂದೂಡಲಾಗಿದೆ. ಬಳಿಕ  ಮಾತನಾಡಿದ ಕುಂಞಾಯಿಸ ಯುವಜನರ ಮಧ್ಯೆ ಕುಟುಂಬ ಸಂಬಂಧಗಳು ಶಿಥಿಲವಾಗುತ್ತಿದೆ ಎಂದೂ ವಿವಾಹ ವಿಮೋಚನೆಗಿರುವ ಹಂಬಲ ಹೆಚ್ಚುತ್ತಿದೆಯಂದೂ, ಇದರ ವಿರುದ್ಧ ಆಯೋಗದ ನೇತೃತ್ವದಲ್ಲಿ ವಿವಾಹಪೂರ್ವ ಕೌನ್ಸಿಲಿಂಗ್‌ಗಳನ್ನು ನಡೆಸಲಾಗುತ್ತಿದೆಯೆಂದು  ಅವರು ನುಡಿದರು. ಅದಾಲತ್‌ನಲ್ಲಿ ನ್ಯಾಯವಾದಿ ಶೀಬ, ಸಿ.ಎ. ಸೀತಾ, ಜಯಶ್ರೀ , ರಮ್ಯ, ಬೈಜು, ಶ್ರೀಧರನ್, ಶ್ರೀಹರಿ ಭಾಗವಹಿಸಿದರು.

You cannot copy contents of this page