ಕಲ್ಯಾಣ ಪಿಂಚಣಿ ಲಪಟಾಯಿಸಿದ ಸರಕಾರಿ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ-ಸಚಿವ

ತಿರುವನಂತಪುರ: ಬಡವರಿಗಾಗಿ ರುವ ಸಾಮಾಜಿಕ ಸುರಕ್ಷಾ ಕಲ್ಯಾಣ ಪಿಂಚಣಿಯನ್ನು ನಕಲಿಯಾಗಿ ಪಡೆದು ವಂಚಿಸಿದ ಸರಕಾರಿ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದೆಂದು   ಹಣಕಾಸು ಖಾತೆ ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ.

ಹೀಗೆ ಕಲ್ಯಾಣ ಪಿಂಚಣಿ ಪಡೆದ ಸಿಬ್ಬಂದಿಗಳಿಗೆ ಶೀಘ್ರ ನೋಟೀಸು ಜ್ಯಾರಿಗೊಳಿಸಲಾಗುವುದು. ಹೀಗೆ ನಕಲಿಯಾಗಿ  ಪಿಂಚಣಿ ಪಡೆಯುತ್ತಿದ್ದ ಸರಕಾರಿ ಸಿಬ್ಬಂದಿಗಳಿಂದ ಆ ಹಣವನ್ನು ಅವರ ವೇತನದಿಂದಲೇ  ವಸೂಲಿ ಮಾಡಲಾಗುವುದು. ಅಲ್ಲದೆ ಅವರ  ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದ್ದಾರೆ.

ತಾಂತ್ರಿಕ ದೋಷದಿಂದ  ಇದು ನಡೆದಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಇಂತಹ  ವಂಚನೆ  ನಡೆಸಲಾಗಿದೆಯೇ ಎಂಬುವುದನ್ನು ಮೊದಲು ಕೂಲಂಕುಷವಾಗಿ ಪರಿಶೀ ಲಿಸಲಾಗುವುದು. ಅದರ ಆಧಾರದಲ್ಲಿ    ಮುಂದಿನ ಕ್ರಮ ಕೈಗೊಳ್ಳಲಾಗುವುದು.  ಇದೇ ವೇಳೆ ಅನಧಿಕೃತವಾಗಿ ಕಲ್ಯಾಣ ಪಿಂಚಣಿ ಪಡೆದ ಸರಕಾರಿ ಸಿಬ್ಬಂದಿಗಳ ಹೆಸರನ್ನು ಸರಕಾರ ಇನ್ನೂ  ಬಹಿರಂಗ ಪಡಿಸಿಲ್ಲ.  ಮಸ್ಟರಿಂಗ್ ಇತ್ಯಾದಿ ಕಠಿಣ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಕಲ್ಯಾಣ ಪಿಂಚಣಿ ಯೋಜನೆಯಲ್ಲಿ ಅನರ್ಹರು ಒಳಗೊಂಡಿರುವುದು ದಂಗುಪಡಿಸುವ ವಿಷಯವಾಗಿದೆ. ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂಬ ಸರ್ಟಿಫಿಕೇಟ್  ನೀಡಿದ ಸ್ಥಳೀಯಾ ಡಳಿತ ಸಂಸ್ಥೆಗಳ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.

ಬಡವರಿಗಿರುವ ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿಬಿದ್ದ 1458 ಸರಕಾರಿ ಸಿಬ್ಬಂದಿಗಳು
ಕಾಸರಗೋಡು: ಬಡವರಿಗಾಗಿ ರಾಜ್ಯ ಸರಕಾರ ವಿತರಿಸುತ್ತಿರುವ ಸಾಮಾಜಿಕ ಸುರಕ್ಷಾ ಕಲ್ಯಾಣ ಪಿಂಚಣಿ ಯೋಜನೆಯಲ್ಲಿ ನಕಲಿಯಾಗಿ ಸೇರ್ಪಡೆಗೊಂಡು ಪಿಂಚಣಿ ಲಪಟಾಯಿಸುತ್ತಿದ್ದ 1458 ಸರಕಾರಿ ಸಿಬ್ಬಂದಿಗಳು ಕೊನೆಗೂ ಸಿಕ್ಕಿ ಬಿದ್ದಿದ್ದಾರೆ. ಹೀಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಬಡವರಿ ಗಾಗಿರುವ ಕಲ್ಯಾಣ ಪಿಂಚಣಿಯನ್ನು ಲಪಟಾಯಿಸುತ್ತಿದ್ದವರಲ್ಲಿ ತಿಂಗಳಿಗೆ ಒಂದು ಲಕ್ಷ ರೂ.ಗಿಂತಲೂ ಹೆಚ್ಚು ವೇತನ ಪಡೆಯುತ್ತಿರುವ ಗಜೆಟೆಡ್ ಶ್ರೇಣಿಯಲ್ಲಿರುವ ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಪ್ರೊಫೆಸರ್ಗಳೂ ಒಳಗೊಂಡಿದ್ದಾರೆ.
ಇದರಲ್ಲಿ ಅತೀ ಹೆಚ್ಚು ಎಂಬAತೆ ರಾಜ್ಯ ಆರೋಗ್ಯ ಇಲಾಖೆಯ 373 ಸಿಬ್ಬಂದಿಗಳು ಹೀಗೆ ಅಕ್ರಮವಾಗಿ ಕಲ್ಯಾಣ ಪಿಂಚಣಿ ಪಡೆದು ಸಿಲುಕಿಕೊಂಡವರಲ್ಲಿ ಒಳಗೊಂಡಿದ್ದಾರೆ. ಉಳಿದಂತೆ ಶಿಕ್ಷಣ ಇಲಾಖೆಯ 224, ಮೆಡಿಕಲ್ ಶಿಕ್ಷಣ ವಿಭಾಗದ 124, ಆಯುಷ್ ಯೋಜನೆಯ 114, ಪಶುಸಂಗೋಪನಾ ಇಲಾಖೆಯ 47, ತಾಂತ್ರಿಕ ಶಿಕ್ಷಣ ಇಲಾಖೆಯ 46, ಹೋಮಿಯೋಪತಿ-41, ಕೃಷಿ 25, ಕಂದಾಯ 35, ಸಾಮಾಜಿಕ ನ್ಯಾಯ 34, ಇನ್ಶೂರೆನ್ಸ್ ಮೆಡಿಕಲ್ ಸಯನ್ಸ್ 31, ಕಾಲೆಜ್ಯುವೇಟ್ ಎಜ್ಯುಕೇಶನ್ 27, ಮಾರಾಟ ತೆರಿಗೆ 14, ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯ 13, ಗ್ರಾಮಾಭಿವೃದ್ಧಿ, ಪೊಲೀಸ್ ಇಲಾಖೆ, ಪಿಎಸ್ಸಿ, ಆಯುರ್ವೇದ ವೈದ್ಯಕೀಯ ಶಿಕ್ಷಣ ಇಲಾಖೆಯ ತಲಾ 10 ಮಂದಿ ಸಿಬ್ಬಂದಿಗಳೂ ಹೀಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಈತನಕ ಬಡವರಿಗಾಗಿರುವ ಕಲ್ಯಾಣ ಪಿಂಚಣಿ ಯೋಜನೆಯಂತೆ ತಿಂಗಳಿಗೆ ತಲಾ 1600 ರೂ.ನಂತೆ ಹಣ ಎಗರಿಸುತ್ತಿದ್ದವರಲ್ಲಿ ಒಳಗೊಂಡಿದ್ದಾರೆ.
ಕಲ್ಯಾಣ ಪಿಂಚಣಿಯನ್ನು ಅಕ್ರಮವಾಗಿ ಪಡೆಯುತ್ತಿರುವವರನ್ನು ಪತ್ತೆಹಚ್ಚಲು ರಾಜ್ಯ ಹಣಕಾಸು ಇಲಾಖೆ ನೀಡಿದ ನಿರ್ದೇಶ ಪ್ರಕಾರ ಇನ್ಫರ್ಮೇಶನ್ ಕೇರಳ ಮಿಷನ್ ನಡೆಸಿದ ಪರಿಶೀಲನೆಯಲ್ಲಿ ಈ ವಂಚನೆ ನಡೆದಿರುವುದು ಪತ್ತೆಹಚ್ಚಲಾಗಿದೆ. ಈ ಪರಿಶೀಲನೆ ಇನ್ನೂ ಮುಂದುವರಿಯುತ್ತಿದ್ದು, ಅದರಲ್ಲಿ ಇನ್ನಷ್ಟು ಸರಕಾರಿ ನೌಕರರು ಸಿಲುಕಿಕೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page