ಕಲ್ಲಾಪುನಲ್ಲಿ ಸ್ಕೂಟರ್ನಿಂದ ಎಸೆಯಲ್ಪಟ್ಟು ಉಳಿಯ ನಿವಾಸಿ ಗೃಹಿಣಿ ಮೃತ್ಯು
ತಲಪ್ಪಾಡಿ: ವಿವಿಧ ಸಂಘ-ಸಂಸ್ಥೆಗ ಳಲ್ಲಿ ಸಕ್ರಿಯರಾಗಿದ್ದ ಮಧೂರು ಉಳಿಯ ನಿವಾಸಿ ಸುಮಾ ನಾರಾಯಣ ಗಟ್ಟಿ (೫೧)ರ ನಿಧನ ಉಳಿಯ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ತೊಕ್ಕೊಟ್ಟು ಕಲ್ಲಾಪು ಸಮೀಪದ ನಾಗನ ಕಟ್ಟೆ ಬಳಿ ಸ್ಕೂಟರ್ನಿಂದ ರಸ್ತೆಗೆಸೆ ಯಲ್ಪಟ್ಟು ಸುಮಾ ಮೃತಪಟ್ಟಿದ್ದಾರೆ.
ಸೋಮೇಶ್ವರ ಪಿಲಾರು ಅರಮನೆ ಕುಟುಂಬ ಮನೆಯಲ್ಲಿ ವಾರ್ಷಿಕ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವ ಹಿಸಿ ಸಂಜೆ ವೇಳೆ ಜಪ್ಪಿನಮೊಗರು ನಲ್ಲಿರುವ ದೊಡ್ಡಮ್ಮನ ಮನೆಗೆ ತೆರಳಿ ವಾಪಸು ಕೋಟೆಕಾರು ಬೀರಿ ಕಡೆಗೆ ಸಹೋದರನ ಜೊತೆ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ಕಲ್ಲಾಪು ಕೆರೆಬೈಲು ಫ್ಲೈ ಓವರ್ಬಳಿ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದರು. ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಸುಮಾ ಗಟ್ಟಿ ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು, ತರುಣ ಕಲಾವೃಂದ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತಿ ನಾರಾಯಣ ಗಟ್ಟಿ ಉಳಿಯ, ಮಕ್ಕಳಾದ ಅಶ್ವಿತಾ, ಅಕ್ಷತಾ, ಆಶಿತ್, ಅಳಿಯ ನಿತಿನ್, ಸಹೋದ ರರು, ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವೇಳೆ ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಸಹಿತ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.