ಕಲ್ಲಿಕೋಟೆಯಲ್ಲಿ ಮತ್ತೆ ‘ನಿಫಾ’ ಭೀತಿ: ಬಾಲಕ ಚಿಕಿತ್ಸೆಯಲ್ಲಿ

ಕಲ್ಲಿಕೋಟೆ: ನಿಫಾ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಕೆಲವು ವರ್ಷಗಳ ಹಿಂದೆ ತತ್ತರಿಸಿದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮತ್ತೆ ಅದೇ ‘ನಿಫಾ’ ಭೀತಿ ಆವರಿಸಿದೆ.

ನಿಫಾ ಶಂಕೆ ತೋರಿದ ೧೪ರ ಹರೆಯದ ಬಾಲಕನೋರ್ವನನ್ನು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯೊಂ ದರಲ್ಲಿ ದಾಖಲಿಸಲಾಗಿದೆ. ಆದರೆ ಈತನ ಆರೋಗ್ಯ ಸ್ಥಿತಿ ಗಂಭೀರ ವಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ಗಂಟಲು ರಸದ ಮಾದರಿ ಯನ್ನು ಪುಣೆಯಲ್ಲಿರುವ ವೈರೋಲಜಿ ಪ್ರಯೋಗಾಲಯಕ್ಕೆ ಸಾಗಿಸಲಾಗಿದೆ. ಅದರ ವರದಿ ಲಭಿಸಿದ ಬಳಿಕವಷ್ಟೇ ಬಾಲಕನಿಗೆ  ತಗಲಿದ್ದು ನಿಫಾ ವೈರಸ್ ಸಾಂಕ್ರಾಮಿಕ ರೋಗವಾಗಿದೆಯೇ ಎಂಬುದನ್ನು ಖಾತರಿಪಡಿಸಲು ಸಾಧ್ಯವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಫಾ ರೋಗ ಲಕ್ಷಣ ಕಂಡು ಬಂದ ಈ ಬಾಲಕನನ್ನು ಮೊದಲು ಪರಿಂದಲ್ ಮಣ್ಣ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಆತನನ್ನು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಟಲ ರಸವನ್ನು ಪರೀಕ್ಷಿಸಿದಾಗ ಅದು ನಿಫಾ ಟು ನಾಟ್ ಪೋಸಿಟಿವ್ ಆಗಿರುವುದಾಗಿ ಪತ್ತೆಹಚ್ಚಲಾಗಿದ್ದು, ಅದರಿಂದಾಗಿ ಬಾಲ ಕನನ್ನು ನಂತರ ಹೆಚ್ಚಿನ ತಪಾಸಣೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

ನಿಫಾ ಲಕ್ಷಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ತುರ್ತು  ಸಭೆ ಕರೆದಿದ್ದು, ಅದರಲ್ಲಿ ಮುಂದಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗು ವುದು. ಬಾವಲಿಯಿಂದ ನಿಫಾ ರೋಗ ಸಾಧಾರಣವಾಗಿ ಹರಡುತ್ತಿದೆ. ಅದರಿಂದಾಗಿ ಬಾವಲಿಗಳನ್ನು ಸೆರೆ ಹಿಡಿದು ಅದನ್ನು ತಪಾಸಣೆಗೊಳಪಡಿ ಸುವ ಕ್ರಮಕ್ಕೂ ಆರೋಗ್ಯ ಇಲಾಖೆ ಇನ್ನೊಂದೆಡೆ ಚಾಲನೆ ನೀಡಿದೆ.

Leave a Reply

Your email address will not be published. Required fields are marked *

You cannot copy content of this page