ಕಳವಿಗೆಂದು ಮನೆಗೆ ನುಗ್ಗಿದ ಕಳ್ಳ: ಮನೆಮಂದಿಗೆ ಎಚ್ಚರವಾದಾಗ ಬದಲಿ ಫೋನ್ ತೆಗೆದು ಪರಾರಿ

ತೃಶೂರು: ಕಳವಿಗೆಂದು ಮನೆಗೆ ನುಗ್ಗಿದ ಕಳ್ಳ ಸ್ವಂತ ಮೊಬೈಲ್ ಫೋನ್ ಅಲ್ಲಿಟ್ಟು ಬದಲಿಯಾಗಿ ಮನೆ ಮಂದಿಯ ಇನ್ನೊಂದು ಫೋನ್ ತೆಗೆದುಕೊಂಡು ಪರಾರಿಯಾದ ಘಟನೆ ನಡೆದಿದ್ದು, ಫೋನ್‌ನ ಜಾಡು ಹಿಡಿದು ಕಳ್ಳನನ್ನು ಬೆನ್ನಟ್ಟಿ ಸೆರೆ ಹಿಡಿಯಲಾಗಿದೆ. ಮಾಳ ತಾನಿಶ್ಶೇರಿ ಕೊಡಿಯನ್ ವೀಟಿಲ್ ಜೋಮೋನ್ (37)ನನ್ನು ಚಾಲಕ್ಕುಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಜೋಮೋನ್ ಅವಾಂತರ ನಡೆಸಿದ್ದಾನೆ. ಮನೆಗೆ ಕಳವಿಗೆಂದು ನುಗ್ಗಿದಾಗ ಅವಸರದಲ್ಲಿ ತನ್ನ ಫೋನ್ ತೆಗೆದುಕೊಳ್ಳುವುದಕ್ಕೆ ಬದಲಾಗಿ ಮನೆಯವರ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ತೃಶೂರು ನೋರ್ತ್ ಚಾಲಕ್ಕುಡಿ ಚೆಂಗಿನಿಮಟ್ಟಂ ಬಾಬು ಎಂಬವರ ಮನೆಯಲ್ಲಿ ಕಳ್ಳ ನುಗ್ಗಿದ್ದನು. ಈ ವೇಳೆ ಮನೆಮಂದಿ ಎಚ್ಚರಗೊಂಡ ಹಿನ್ನೆಲೆಯಲ್ಲಿ ಅಲ್ಲಿಂದ ಪರಾರಿಯಾಗುವ ಯತ್ನದಲ್ಲಿ ಈ ಅವಾಂತರ ನಡೆದಿದೆ. ಲಭಿಸಿದ ಫೋನ್‌ನ ಆಧಾರದಲ್ಲಿ ಬಳಿಕ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ.

2010ರಲ್ಲಿ ಚಾಲಕ್ಕುಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕಳವು ಕೇಸು ದಾಖಲಾಗಿತ್ತು. ಅಲ್ಲದೆ ಮಾಳ, ನೆಡುಂಬಾಶೇರಿ ಸಹಿತ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಕೇಸು ದಾಖಲಾಗಿದೆ.

You cannot copy contents of this page