ಕಾಂಗ್ರೆಸ್ ನಿಂದ ಹೊರಹಾಕಲ್ಪಟ್ಟ ಪಿ. ಸರಿನ್ ಎಡರಂಗ ಅಭ್ಯರ್ಥಿ

ಪಾಲಕ್ಕಾಡ್: ಉಮೇದ್ವಾರಿಕೆ ಲಭಿಸದ ಹೆಸರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು, ಕೊನೆಗೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಕಾಂಗ್ರೆಸ್‌ನ ರಾಜ್ಯ ಡಿಜಿಟಲ್ ಸೆಲ್ ಸಂಚಾಲಕರಾಗಿದ್ದ ಡಾ. ಪಿ, ಸರಿನ್‌ರನ್ನು ಪಾಲಕ್ಕಾಡ್ ವಿಧಾನ ಸಭಾ ಉಪಚುನಾವಣೆಯಲ್ಲಿ ಎಡರಂಗದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿ ಳಿಸಲು ಸಿಪಿಎಂ ತೀರ್ಮಾನಿಸಿದೆ.

ಪಾಲಕ್ಕಾಡ್‌ನಲ್ಲಿ ಯೂತ್ ಕಾಂಗ್ರೆಸ್ ನೇತಾರ ರಾಹುಲ್ ಮಾಕೂಟ್ಟತ್ತಿಲ್‌ರನ್ನು  ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕಾಂಗ್ರೆಸ್‌ನ ತೀರ್ಮಾನವನ್ನು ಪ್ರತಿಭಟಿಸಿ ಸರಿನ್ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದರು. ಆ ಕಾರಣದಿಂದ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿದೆ. ಅದಾದ ಬೆನ್ನಲ್ಲೇ ಅವರನ್ನು ಈ ಕ್ಷೇತ್ರದಲ್ಲಿ ಎಡರಂಗದ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ತೀರ್ಮಾನವನ್ನು ಸಿಪಿಎಂ ಕೈಗೊಂಡಿದೆ.

You cannot copy contents of this page