ಕಾಂಗ್ರೆಸ್ ನೇತಾರನಿಗೆ ಹಲ್ಲೆ : ಸೀತಾಂಗೋಳಿಯಲ್ಲಿ ಪ್ರತಿಭಟನೆ

ಸೀತಾಂಗೋಳಿ: ಪುತ್ತಿಗೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಊಜಂಪದವಿನ ಸುಲೈಮಾನ್‌ರಿಗೆ ಹಲ್ಲೆಗೈದ ಘಟನೆಯನ್ನು ಪ್ರತಿಭಟಿಸಿ ಕಾಂಗ್ರೆಸ್‌ನಿಂದ ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಅವರು ಮಾತನಾಡಿ ಸುಲೈಮಾನ್‌ರಿಗೆ ಹಲ್ಲೆಗೈದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಕುಂಬಳೆ ಬ್ಲೋಕ್ ಅಧ್ಯಕ್ಷ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ನಾಸರ್ ಮೊಗ್ರಾಲ್, ಲಕ್ಷ್ಮಣ ಪ್ರಭು, ಶ್ರೀನಾಥ್ ಬದಿಯಡ್ಕ, ಸತ್ಯನ್ ಉಪ್ಪಳ, ಖಮರುದ್ದೀನ್, ಶುಕೂರ್ ಕಾಣಾಜೆ, ಜುನೈದ್ ಉರ್ಮಿ, ಗಾಂಭೀರ್, ವಸಂತ ಮಾಸ್ತರ್, ಕೇಶವ, ರವಿರಾಜ್, ಸಲೀಂ ಪುತ್ತಿಗೆ, ಕುಂಞಹಮ್ಮದ್, ಶಾಜಿ, ಹನೀಫ್ ಪಡಿಂಞಾರ್, ರಾಸಿ, ಗಣೇಶ್ ಭಂಡಾರಿ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page