ಕಾಂಗ್ರೆಸ್‌ನಿಂದ ಅಂಬೇಡ್ಕರ್ ಸ್ಮೃತಿ ದಿನಾಚರಣೆ
ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಭಾರತದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸ್ಮೃತಿ ದಿನಾಚರಣೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಅಧ್ಯಕ್ಷತೆ ವಹಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಸದಾಶಿವ ಕೆ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಮುಖಂಡರಾದ ಶಾಂತಾ ಆರ್. ನಾಯ್ಕ್, ಚಂದ್ರಶೇಖರ ಶೆಟ್ಟಿ ಬೆಜ್ಜ, ಫ್ರಾನ್ಸಿಸ್ ಡಿ’ಸೋಜಾ, ಮೊಹಮ್ಮದ್ ಮಜಾಲ್, ಗಣೇಶ್ ಪಾವೂರು, ವಿನೋದ್ ಕುಮಾರ್ ಪಾವೂರು, ಕೆ.ಎಸ್. ಗಂಗಾಧರ್, ಸದಾಶಿವ ಪಜ್ವ, ಬಾಸಿತ್ ತಲೆಕ್ಕಿ, ವೇದಾವತಿ, ಶಾಫಿ ತಲೆಕಳ, ಎ.ಎಂ. ಉಮ್ಮರ್ ಕುಂಞಿ, ಉಮ್ಮರ್ ಪಾಲೆಂಗ್ರಿ, ಅಬೂಬಕ್ಕರ್ ಕಿನ್ಯಜೆ, ಮೂಸಾ ಡಿ.ಕೆ., ಅಬೂಬಕ್ಕರ್ ಮಣಿಪರಂಬು, ಅಬ್ದುಲ್ ರಹಿಮಾನ್ ಕೋಳ್ಯೂರು, ಅಬೂಬಕ್ಕರ್ ಉರ್ಣಿ, ಸಮದ್ ಕೆದಕ್ಕಾರ್, ಉಸ್ಮಾನ್ ಆನೆಕಲ್ಲು, ಸಲೀಂ ಒಡಿಪ್ರಕೋಡಿ, ಎಲಿಯಾಸ್ ಡಿ’ಸೋಜಾ, ಉಮ್ಮರ್ ಬೆಜ್ಜ ಉಪಸ್ಥಿತರಿದ್ದರು. ದಿವಾಕರ್ ಎಸ್.ಜೆ. ಸ್ವಾಗತಿಸಿ, ಹನೀಫ್ ಪಡಿಂಞಾರ್ ವಂದಿಸಿದರು.