ಕಾಂಗ್ರೆಸ್‌ನಿಂದ ನಾಳೆ ವಿವಿಧ ಕಡೆಗಳಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ

ಕಾಸರಗೋಡು: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ೩೧ನೇ ಹುತಾತ್ಮ ದಿನಾಚರಣೆಯಾದ ನಾಳೆ ಬೆಳಿಗ್ಗೆ 8 ಗಂಟೆಗೆ ಬೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ 8.30ಕ್ಕೆ ಮಂಡಲ ಸಮಿತಿಗಳ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಯಲಿದೆ. 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ಪುಷ್ಪಾರ್ಚನೆ, ಸಂಸ್ಮರಣೆ ಸಮ್ಮೇಳನ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಡಾ. ಎ.ಎಂ. ಶ್ರೀಧರನ್ ಸಂಸ್ಮರಣೆ ನಡೆಸುವರು. ಸಂಜೆ ೩ ಗಂಟೆಗೆ  ಬ್ಲೋಕ್ ಕಾಂಗ್ರೆಸ್ ಸಮಿತಿಗಳ ನೇತೃದ್ವದಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ ಸಮ್ಮೇಳನ, ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞೆ ನಡೆಯಲಿದೆ.

ಕಾರಡ್ಕ ಬ್ಲೋಕ್ ಸಮಿತಿ ವತಿಯಿಂದ ಮುಳ್ಳೇರಿಯ ಪೇಟೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಕುಂಬಳೆಯಲ್ಲಿ ನ್ಯಾಯವಾದಿ ಸುಬ್ಬಯ್ಯ ರೈ, ಮಂಜೇಶ್ವರದಲ್ಲಿ ರಮೇಶನ್ ಕರುವಾ ಚ್ಚೇರಿ ಉದ್ಘಾಟಿಸುವರು. ಉಳಿದ ಕಡೆಗ ಳಲ್ಲೂ ಹಲವು ಗಣ್ಯರು ಭಾಗವಹಿಸುವರು.

You cannot copy contents of this page