ಕಾಟುಕುಕ್ಕೆಯಲ್ಲಿ ಘರ್ಷಣೆ: ಇಬ್ಬರು ಆಸ್ಪತ್ರೆಯಲ್ಲಿ
ಬದಿಯಡ್ಕ: ಕಾಟುಕುಕ್ಕೆಯ ಗೆರಟೆ ಕಂಪೆನಿಗೆ ಸಂಬಂಧಿಸಿ ಉಂಟಾದ ತರ್ಕದ ಹೆಸರಲ್ಲಿ ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡು ಹಾಗೂ ಕುಂಬಳೆಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗೆರಟೆ ಕಂಪೆನಿ ಮಾಲಕನ ಸಂಬಂಧಿಕನಾದ ಕಾಟುಕುಕ್ಕೆಯ ಉಮೇಶ್‌ರನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲೂ, ಕಂಪೆನಿ ಪರಿಸರದ ನಿವಾಸಿಯಾದ ಉಮೇಶ್ ನಾಕ್ ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಈ ಘಟನೆ ನಡೆದಿದೆ. ಉಮೇಶ್‌ರ ದೂರಿನಂತೆ ತಂಡವೊಂದರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.