ಕಾಡಾನೆ ದಾಳಿಯಿಂದ ವ್ಯಾಪಕ ಕೃಷಿ ನಾಶ

ಅಡೂರು: ದೇಲಂಪಾಡಿ ಪಂಚಾಯತ್‌ನ ಪರಪ್ಪೆ ಎಂಬಲ್ಲಿ ಕಾಡಾನೆ ಹಾವಳಿಯಿಂದಾಗಿ ವ್ಯಾಪಕ ಕೃಷಿ ನಾಶ ಸಂಭವಿಸಿದೆ. ಪರಪ್ಪೆ ಪೊಕ್ಲಮೂಲೆ ಎಂಬಲ್ಲಿನ ಸಮೀರ್‌ರ ತೋಟಕ್ಕೆ ನುಗ್ಗಿದ ಕಾಡಾನೆಗಳು 10ಕ್ಕೂ ಹೆಚ್ಚು ತೆಂಗಿನ ಮರಗಳು, 12 ಕಂಗುಗಳು ಹಾಗೂ ಹಲವಾರು ಬಾಳೆಗಳನ್ನು ನಾಶಪಡಿಸಿವೆ. ಸಮೀರ್‌ರ ಸಹೋದರ ಅಶ್ರಫ್‌ರ ತೋಟಕ್ಕೂ ಕಾಡಾನೆ ನುಗ್ಗಿ ವ್ಯಾಪಕ ನಾಶನಷ್ಟ ಸೃಸ್ಟಿಸಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ತಲುಪಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.

RELATED NEWS

You cannot copy contents of this page