ಕಾಡುಹಂದಿ ಉಪಟಳ ಸಂಕಷ್ಟಕ್ಕೀಡಾದ ಕೃಷಿಕರು

ಮಂಜೇಶ್ವರ: ಮಂಜೇಶ್ವರ, ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಕಾಡು ಹಂದಿಗಳ ಉಪಟಳ ದಿಂದ ಬsÀತ್ತದ ಕೃಷಿ ಸಹಿತ ಇತರ ಕೃಷಿ ನಾಶಗೊಂಡು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಮಾಣಿಂಜ ಸಮೀಪದ ಅಕ್ಕರೆ, ಅಂಬಿತ್ತಡಿ, ಪೈವಳಿಕೆ ಪಂಚಾಯತ್ ವ್ಯಾಪ್ತಿ ಗೊಳಪಟ್ಟ ಕುಡಾಲು ಬಯಲು, ಮೇರ್ಕಳ, ಚೇವಾ ರು ಬಯಲು ಪ್ರದೇಶದಲ್ಲಿ ಬsÀತ್ತದ ಕೃಷಿ ಅಲ್ಲದೆ ಬಾಳೆ ಸಹಿತ ತರಕಾರಿ ಕೃಷಿಯನ್ನು ನಾಶಮಾಡುತ್ತಿದೆ. ರಾತ್ರಿ ಹೊತ್ತಿನಲ್ಲಿ ಕಾಡುಹಂದಿಗಳ ಗುಂಪು ಬಂದು ಗದ್ದೆಯಲ್ಲಿರುವ ಬತ್ತದ ಕೃಷಿ ಸಹಿತ ಇತರ ಗಿಡ ಗಳನ್ನು ನಾಶ ಮಾಡುವುದರಿಂದ ಕೃಷಿಕರು ಆತಂಕಿತರಾಗಿದ್ದಾರೆ. ನಿದ್ರೆಬಿಟ್ಟು ರಾತ್ರಿ ಹಂದಿಗಳನ್ನು ಕಾಯಬೇಕಾದ ಪರಿಸ್ಥಿತಿ ಉಂಟಾಗಿರುವುದಾಗಿ ಕೃಷಿಕರು ತಿಳಿಸಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಅಧಿಕಾರಿಗಳಿಗೆ ದೂರ ನೀಡಿರುವುದಾಗಿ ಕುಡಾಲು ಪ್ರದೇಶದ ಕೃಷಿಕರು ತಿಳಿಸಿದ್ದಾರೆ.

You cannot copy contents of this page