ಕಾಡುಹಂದಿ ದಾಳಿ ಮಹಿಳೆಗೆ ಗಾಯ

ಕಾಸರಗೋಡು: ಕಾಡುಹಂ ದಿಯ ದಾಳಿಗೆ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ರಾಜಪುರಂ ಕೋಟೆಕುನ್ನು ಬಿನೊ ಎಂಬವರ ಪತ್ನಿ ಪೌಲಿ ಬಿನೊ (52) ಗಾಯಗೊಂಡ ಮಹಿಳೆ. ಇವರನ್ನು ಪೂಡಂಗಲ್‌ನಲ್ಲಿರುವ ತಾಲೂಕು ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ.

ಪೌಲಿ ನಿನ್ನೆ ರಾಜಪುರಂ ಕೋಟೆಕುನ್ನಿನಲ್ಲಿರುವ ತಮ್ಮ ತೆಂಗಿನ ತೋಟದ ಕಾಡುಗಳನ್ನು ಕಾರ್ಮಿಕರ ಜತೆ ಸೇರಿ  ಶುಚೀಕರಿ ಸುತ್ತಿದ್ದ ವೇಳೆ  ಅಲ್ಲಿಗೆ ದಿಢೀರ್ ಆಗಮಿಸಿ ಕಾಡು ಹಂದಿ ಅವರಿಗೆ ತಿವಿದಿದೆ. ಗಾಯಗೊಂಡ ಅವರನ್ನು ಇತರ ಕಾರ್ಮಿಕರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು.

You cannot copy contents of this page