ಕಾಪಾ ಪ್ರಕರಣದಲ್ಲಿ ಸೆರೆಗೀಡಾಗಿ ಗಡಿಪಾರು ಮಾಡಿದ ಆರೋಪಿಯಿಂದ ಕಾನೂನು ಉಲ್ಲಂಘನೆ: ಉಪ್ಪಳ ನಿವಾಸಿ ಮತ್ತೆ ಸೆರೆ
ಕುಂಬಳೆ: ಕಾಪಾ ಪ್ರಕರಣದಲ್ಲಿ ಸೆರೆಗೀ ಡಾಗಿ ಕಾನೂನು ಉಲ್ಲಂಘನೆ ನಡೆಸಿದ ಆರೋಪಿ ಮತ್ತೆ ಸೆರೆಗೀಡಾಗಿದ್ದಾನೆ.
ಉಪ್ಪಳ ಹಿದಾಯತ್‌ನಗರ ನಿವಾಸಿ ಮುಹಮ್ಮದ್ ಆರಿಫ್ (31) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಡಿಐಜಿಯ ಆದೇಶ ಪ್ರಕಾರ ಕಾಪಾ ಕಾನೂನುಪ್ರಕಾರ ಕಳೆದ ಎಪ್ರಿಲ್ ೨೧ರಿಂದ ಆರು ತಿಂಗಳಿಗೆ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವುದಕ್ಕೆ ಆರಿಫ್‌ಗೆ ನಿಷೇಧ ಹೇರಲಾಗಿತ್ತು.
ಆದರೆ ಈ ಆದೇಶವನ್ನು ಉಲ್ಲಂಘಿಸಿ ಮೀಂಜ ಮಜಿಬೈಲಿನ ಭಗವತಿ ಕ್ಷೇತ್ರ ರಸ್ತೆಯಲ್ಲಿರುವ ಮನೆಗೆ ತಲುಪಿದಾಗ ಮುಹಮ್ಮದ್ ಆರಿಫ್‌ನನ್ನು ಬಂಧಿಸಲಾಗಿದೆ. ಇತ್ತೀಚೆಗೆ ಊರಿಗೆ ತಲುಪಿದ ಈತನ ಚಲನವಲನ ತಿಳಿಯಲು ಪೊಲೀಸರು ಸೈಬರ್ ಸೆಲ್‌ನ ಮೂಲಕ ತನಿಖೆ ನಡೆಸಿದ್ದರು. ನಂತರ ಈತನನ್ನು ಕ್ವಾರ್ಟರ್ಸ್ ನಿಂದ ಸೆರೆಹಿಡಿಯಲಾಗಿದೆ. ಸೆರೆಗೀ ಡಾದ ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.