ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ವಿರುದ್ಧ ಹೊಸದುರ್ಗ ಪೊಲೀಸರು ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿದ್ದಾರೆ.
ಹೊಸದುರ್ಗ ಕಲ್ಯಾಣ ರಸ್ತೆಯ ಮುತ್ತನ್‌ಪಾರ ನಿರೋಕಿ ನಿವಾಸಿ ಎನ್. ಮನುರಾಜ್ (೨೭) ಬಂಧಿತ ಆರೋಪಿ. ಈತನನ್ನು ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಒಯ್ದು ಅಲ್ಲಿ ಕೂಡಿ ಹಾಕಲಾಗಿದೆ.
ಬಂಧಿತ ಆರೋಪಿ ಕೊಲೆಯತ್ನ, ಹಲ್ಲೆ, ಮದ್ಯ ಸಾಗಾಟ ಇತ್ಯಾದಿ ಏಳು ಪ್ರಕರಣಗಳಲ್ಲಿ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.