ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣ ಮದ್ಯ ವಶ: ಇಬ್ಬರಸೆರೆ
ಕಾಸರಗೋಡು: ಕಳನಾಡು ಮೇಲ್ಪರಂಬದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಇನ್ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ನೋಂದಾಯಿತ ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚಾವಕ್ಕಾಡ್ ವಡಗರ ಪುನ್ನಯಾರು ನಿವಾಸಿ ಅನ್ಸೀಫ್ ಎ.ಎಚ್ (38) ಮತ್ತು ಕಾಸರಗೋಡಿನ ಚಂದ್ರಶೇಖರ (39) ಎಂಬಿವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ಗಳಾದ ಶ್ರೀನಿವಾಸನ್ ಪತ್ತಿಲ್, ಪ್ರಮೋದ್ ಕುಮಾರ್ ವಿ ಪ್ರಿವೆಂಟೀವ್ ಆಫೀಸರ್ ಅಜೀಶ್ ಸಿ, ಸಿಇಒಗಳಾದ ಮಂಜುನಾಥನ್ ವಿ, ರಾಜೇಶ್ ವಿ, ಶಿಜಿತ್ ವಿ.ವಿ ಮತ್ತು ಅತುಲ್ ಟಿ.ವಿ ಎಂಬಿವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.