ಕಾರು ಕೆರೆಗೆ ಬಿದ್ದು ಮೂವರ ದುರ್ಮರಣ

ತೃಶೂರು:  ಇಲ್ಲಿನ ಮೊಳಕುಳಿಕಾಟ್ಟುಶ್ಶೇರಿ ವರದನಾಡು ಕ್ಷೇತ್ರ ಬಳಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಲ್ಲುಗಳಿಂದಾವೃತವಾಗಿರುವ ೫೦ ಅಡಿ ಆಳದ ಕಂದಕದಲ್ಲಿರುವ ಕೆರೆಗೆ ಬಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಮೃತರನ್ನು ಪುತ್ತನ್‌ಚಿರ ಮುರಿಕ್ಕೋಡು ನಿವಾಸಿ ತಾಕೋಲ್ ಕ್ಕಾರನ್ ಚಿಟ್ಟೋ (೪೮), ಕುಳಿಕ್ಕಾಟ್ಟುಶ್ಶೇರಿಯ ಮುತ್ತಡತ್ ಶ್ಯಾಂ (೫೧) ಮತ್ತು ಕೋಂಬೋಡಿತ್ತ್ ಮಾಕ್ಕಲ್‌ನ ಪುನ್ನೆಲಿ ಪರಂಬಿಲ್ ಜೋರ್ಜ್ (೪೮) ಎಂದು ಗುರುತಿಸಲಾಗಿದೆ. 

ಮೃತದೇಹಗಳನ್ನು  ಇಂದು ಬೆಳಿಗ್ಗೆಯಷ್ಟೇ ಕೆರೆಯಿಂದ ಹೊರತೆಗೆಯಲು ಸಾಧ್ಯವಾಯಿತು. ಅಗ್ನಿಶಾಮಕದಳ, ಪೊಲೀಸರು ಮತ್ತು ಊರವರು ಮೃತದೇಹಗಳನ್ನು ಹೊರತೆಗೆಯುವಲ್ಲಿ ಸಹಕರಿಸಿದರು.

You cannot copy contents of this page