ಕಾರು ಢಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದಾಗ ಅಪರಿಮಿತ ವೇಗದಲ್ಲಿ ಬಂದ ಕಾರು ಡಿಕ್ಕಿಹೊಡೆದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ಮಾಡ ಬಳಿಯ ಕೊಳಕೆ ಗುತ್ತು ನಿವಾಸಿ ರಘುನಾಥ ಆಳ್ವರ ಪುತ್ರ ಮಂಗಳೂರು ನಿಟ್ಟೆ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ (೧೭) ಮೃತಪಟ್ಟ ದುರ್ದೆವಿ. ಶುಕ್ರವಾರ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳಲು ಉದ್ಯಾವರ ಮಾಡ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಮಂಗಳೂರಿನಿದ ಕಾಸರಗೋಡು ಭಾಗಕ್ಕೆ ವೇಗದಲ್ಲಿ ತೆರಳುತ್ತಿದ್ದ ಇನೋವ ಕಾರು ಸುಮಂತ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಈತನನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದಾನೆ. ಈ ಸಂಬAಧ ಮಂಜೇಶ್ವರ ಪೊಲೀಸರು ಚಾಲಕನ ವಿರುದ್ದ ಕೇಸು ದಾಖಲಿಸಿ, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತ ವಿದ್ಯಾರ್ಥಿ ತಂದೆ, ತಾಯಿ ಲಕ್ಷಿ÷್ಮÃ, ಸಹೋದರಿ ಸುವಿಧ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ಸಂಜೆ ಉದ್ಯಾವರ ಮಾಡ ಸಾರ್ವಜನಿಕ ಹಿಂದೂರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ನಿಧನಕ್ಕೆ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಸಮಿತಿ, ಉತ್ಸವ ಸಮಿತಿ, ಬಂಟರ ಸಂಘ ಮಂಜೇಶ್ವರ ವಲಯ ಸಮಿತಿ, ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಕುಂಜತ್ತೂರು, ಕ್ಷೇತ್ರದ ಸೇವಾ ಸಮಿತಿ ಸಂತಾಪ ಸೂಚಿಸಿದೆ. ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಲು ಕಾರಣ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ಎಂದು ಆರೋಪಿಸಿ ಉದ್ಯಾವರ ಮಾಡದ ರಸ್ತೆಯಲ್ಲಿ ವಿದ್ಯಾರ್ಥಿಯ ಮೃತದೇಹವನ್ನಿರಿಸಿ ನಾಗರಿಕರು ನಿನ್ನೆ ಸಂಜೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ನಡೆದಾಡಲು ಫುಟ್‌ಪಾತ್ ಇಲ್ಲ, ರಸ್ತೆ ದಾಟಲು ಮೇಲ್ಸೇತುವೆ ವ್ಯವಸ್ಥೆಯಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು. ಸುಗಮ ಸಂಚಾರಕ್ಕೆ ವ್ಯವಸ್ಥೆ ಏರ್ಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page