ಕಾರು ತಡೆದು ನಿಲ್ಲಿಸಿ ನವದಂಪತಿಗೆ ಆಕ್ರಮಣ: ಮೂವರು ಆಸ್ಪತ್ರೆಯಲ್ಲಿ
ಕುಂಬಳೆ: ಕಾರು ತಡೆದು ನಿಲ್ಲಿಸಿ ನವದಂಪತಿ ಹಾಗೂ ವರನ ಸಹೋದರನಿಗೆ ಆಕ್ರಮಿಸಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂ ಡ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಸಮೀಪದ ಅಬ್ದುಲ್ ಲತೀಫ್, ಸಹೋದರ ಮುಹಮ್ಮದ್ ಅಲ್ತಾಫ್ (೨೨), ಪತ್ನಿ ಡಿ.ಎಂ. ಶಮ್ನ (೨೦) ಎಂಬಿವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಸಂಜೆ ಉಪ್ಪಳದಲ್ಲಿ ನಡೆದ ಘಟನೆ ಕುರಿತು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು ಈ ರೀತಿ ತಿಳಿಸುತ್ತಿದ್ದಾರೆ-“ಗಲ್ಫ್ ಉದ್ಯೋಗಿಯಾದ ಮುಹಮ್ಮದ್ ಅಲ್ತಾಫ್ ಹಾಗೂ ಚೌಕಿ ನಿವಾಸಿಯಾದ ಶಮ್ನರ ಮದುವೆ ಮೂರು ತಿಂಗಳ ಹಿಂದೆ ನಡೆದಿದೆ. ನಿನ್ನೆ ಕಾಸರಗೋಡಿನ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡು ಕಾರಿನಲ್ಲಿ ಇಬ್ಬರು ಮರಳಿದ್ದಾರೆ. ಈ ಮಧ್ಯೆ ಆಟೋದಲ್ಲಿ ಹಿಂಬಾಲಿಸಿ ತಲುಪಿದ ಶಮ್ನರ ತಾಯಿ ಮೊಗ್ರಾಲ್‌ಗೆ ತಲುಪಿದಾಗ ಕಾರು ತಡೆದು ನಿಲ್ಲಿಸಿ ಹಲ್ಲೆಗೈಯ್ಯಲು ಮುಂದಾದಾಗ ಅಲ್ಲಿಂದ ಕಾರಿನೊಂದಿಗೆ ತಪ್ಪಿಸಿಕೊಂಡು ಸಾಗಿ ಮುಹಮ್ಮದ್ ಅಲ್ತಾಫ್‌ರಿಗೆ ಫೋನ್ ಕರೆಮಾಡಿ ವಿಷಯ ತಿಳಿಸಲಾಯಿತು. ತಾಯಿ ಆಟೋದಲ್ಲಿ ಬರುತ್ತಿರುವುದಾಗಿ ತಿಳಿಸಿದಾಗ ವೃದ್ಧ ತಂದೆತಾಯಿಯಿರುವ ಬಂಬ್ರಾಣದ ಮನೆಗೆ ಬರುವುದು ಬೇಡವೆಂದೂ ಉಪ್ಪಳದಲ್ಲಿರುವ ಸಂಬಂಧಿಕರ ಮನೆಗೆ ಹೋಗುವಂತೆ ತಿಳಿಸಲಾಯಿತು. ಇದರಂತೆ ಕಾರಿನೊಂದಿಗೆ ಅಲ್ತಾಫ್ ಹಾಗೂ ಪತ್ನಿ ಉಪ್ಪಳಕ್ಕೆ ತಲುಪಿದ್ದಾರೆ. ಸಹೋದರ ಅಬ್ದುಲ್ ಲತೀಫ್‌ರನ್ನು ಕಾದು ನಿಲ್ಲಲಾಯಿತು. ಆಟೋ ದಲ್ಲಿ ತಲುಪಿದ ತಾಯಿ ಶಮ್ನರ ಕುತ್ತಿಗೆ ಹಿಡಿಯುವುದರೊಂದಿಗೆ ಹೊಕೈ ನಡೆಯಿತು. ಈ ಮಧ್ಯೆ ಅಬ್ದುಲ್ ಲತೀಫ್ ಕೂಡಾ ಸ್ಥಳಕ್ಕೆ ತಲುಪಿದರು. ಇದೇ ವೇಳೆ ಕಬ್ಬಿಣದ ಸರಳಿನಿಂದ ಅಬ್ದುಲ್ ಲತೀಫ್, ಸಹೋದರ ಹಾಗೂ ಪತ್ನಿಗೆ ಹೊಡೆದು ಗಾಯಗೊಳಿಸಲಾಯಿತು. ಬೊಬ್ಬೆ ಕೇಳಿ ಜನರು ಅಲ್ಲಿ ಸೇರಿದಾಗ ಆಟೋದಲ್ಲಿ ತಲುಪಿದ ತಂಡ ಪರಾರಿಯಾಯಿತು. ಬಳಿಕ ಮಂಜೇಶ್ವರ ಪೊಲೀಸರು ತಲುಪಿ ಗಾಯಗೊಂಡವರು ಆಸ್ಪತ್ರೆಯಲ್ಲಿ ದಾಖಲಾಗುವಂತೆ ತಿಳಿಸಿದ್ದಾರೆ”.