ಕಾರು-ಬೈಕ್ ಢಿಕ್ಕಿ: ಗಾಯಗೊಂಡ ಯುವಕ ಮೃತ್ಯು
ಹೊಸದುರ್ಗ: ಕಾರು-ಬೈಕ್ ಢಿಕ್ಕಿಹೊ ಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರ. ನೀಲೇಶ್ವರ ಚಿರಪ್ಪುರ ಆಲಿನ್ ಕೀಳ್ ನಿವಾಸಿ ಪೈಂಟಿಂಗ್ ಕಾರ್ಮಿಕ ರಘು ಎಂಬವರ ಪುತ್ರ ಕಿಶೋರ್ ಕುಮಾರ್ (20) ಮೃತಪಟ್ಟ ದುರ್ದೈವಿ. ಶನಿವಾರ ಮಧ್ಯಾಹ್ನ ಕೊವ್ವಲ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ಕಿಶೋರ ಸಂಚರಿಸುತ್ತಿದ್ದ ಬೈಕ್ಗೆ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ಕಿಶೋರ್ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ವೇಳೆ ಇವರು ಮೃತಪಟ್ಟರು. ಮೃತರು ತಾಯಿ ವಿದ್ಯಾ, ಸಹೋದರಾರದ ಕಿರಣ್, ಕಾರ್ತಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.