ಕಾರುಣ್ಯ ಚಟುವಟಿಕೆ ಫಲಪ್ರಾಪ್ತಿ ಲಭಿಸಿಲ್ಲ: ಚಿಕಿತ್ಸೆ ಮಧ್ಯೆ ಅಧ್ಯಾಪಕ ನಿಧನ

ಬದಿಯಡ್ಕ: ಕ್ಯಾನ್ಸರ್ ತಗಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ, ಪಿಲಾಂಕಟ್ಟೆ ನಿವಾಸಿ ಪ್ರಶಾಂತ್ ರೈ (41) ಮೃತಪಟ್ಟರು. ಇವರ ಚಿಕಿತ್ಸೆಗಾಗಿ ಊರಿವರು ಹಣ ಸಂಗ್ರಹಿಸಿದ್ದರು. ಆಟೋರಿಕ್ಷಾ ಚಾಲ ಕರು, ಬಸ್ ಸಿಹಬ್ಬಂದಿಗಳು ಕಾರುಣ್ಯ ಯಾತ್ರೆ ನಡೆಸಿ ಹಣ ಸಂಗ್ರಹಿಸಲಾಗಿ ದ್ದರೂ ಜೀವ ಉಳಿಸಲು ಸಾಧ್ಯವಾಗದಿ ರುವುದು ಈ ಭಾಗದಲ್ಲಿ ಶೋಕಸಾಗರಕ್ಕೆ ಕಾರಣವಾಗಿದೆ. ಮುಂಡಿತ್ತಡ್ಕ ಶಾಲೆಯಲ್ಲಿ ಅಧ್ಯಾಪಕರಾಗಿರುವ ಪ್ರಶಾಂತ್ ರೈ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ತಂದೆ ರಾಮ ಮಾಸ್ತರ್, ತಾಯಿ ಸರಳ, ಪತ್ನಿ ದಿವ್ಯ, ಮಕ್ಕಳಾದ ಮನಸ್ವಿ, ಅನುಶ್ರೀ, ಸಹೋದರ  ಗುರುಪ್ರಸಾದ್ ರೈ (ಪಳ್ಳತ್ತಡ್ಕ ಶಾಲೆ ಶಿಕ್ಷಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಇಂದು ಸಂಜೆ ಊರಿಗೆ ತರಲಾಗುವುದು.

You cannot copy contents of this page