ಕಾರ್ಮಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ನಾಳೆ
ನೀರ್ಚಾಲು: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ನಾಳೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿದೆ. ಬೆಳಿಗ್ಗೆ 7.30ಕ್ಕೆ ಪೂಜೆ, ೮ಕ್ಕೆ 12 ತೆಂಗಿನಕಾಯಿ ಗಣಪತಿ ಹವನ, 9.30ರಿಂದ ತುಳುವ ಮಹಾಸಭೆ ಕಾಸರಗೋಡು ತಾಲೂಕು ಇವರಿಂದ ಮಂದಾರ ರಾಮಾಯಣ ನಡೆಯಲಿದೆ. ಮಂಗಳೂರು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್ ಭಟ್ ಮಂದಾರ ಉದ್ಘಾಟಿಸುವರು. ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಅಧ್ಯಕ್ಷತೆ ವಹಿಸು ವರು. ಸುಗಿಪು-ದುನಿಪು ಕಾರ್ಯಕ್ರಮವನ್ನು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರಶಾಂತ ರೈ ಪುತ್ತೂರು, ರಚನ ಚಿತ್ಗಲ್, ಲವಕುಮಾರ್ ಐಲ ನಡೆಸಿಕೊಡುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6.30ರಿಂದ ದುರ್ಗಾಪೂಜೆ, ರಾತ್ರಿ ೮ಕ್ಕೆ ಮಹಾಪೂಜೆ, 8.30ರಿಂದ ಅನ್ನ ಸಂತರ್ಪಣೆ ನಡೆಯಲಿದೆ.