ಮಂಜೇಶ್ವರ: ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಬೇಕು. ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆ ಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು. ಕಾವ್ಯದ ಮಾತು ಧ್ವನಿಯಾಗಬೇಕು ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂ ಗಳೂರಿನ ರಂಗಮAಡಲ ಹಾಗೂ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ 11ನೇ ಕವಿಗೋಷ್ಠಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆ ಯನ್ನು ಅನುಸರಿಸಿ ದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದರು.
ಪ್ರಾಧ್ಯಾಪಿಕೆ ಹಾಗೂ ಕವಯಿತ್ರಿ ಡಾ.ಕೆ.ವಿ.ಸಿಂಧು ಉದ್ಘಾಟಿಸಿ ಮಾತನಾಡಿ, ಭಾಷೆ ಕೇವಲ ಆಶಯ ವಿನಿಮಯದ ಮಾಧ್ಯಮ ಮಾತ್ರವಲ್ಲ. ನಮ್ಮ ವಿಕಾರಗಳನ್ನು ಪ್ರತಿಫಲಿಸುವ ಕನ್ನಡಿಯೂ ಆಗಿದೆ. ಸಂಸ್ಕಾರ, ಜೀವನ ಚರ್ಯೆಯನ್ನು ಭಾಷೆ ಪ್ರತಿಫಲಿ ಸುತ್ತದೆ. ಬಹುಭಾಷಾ ನೆಲವಾದ ಕಾಸರ ಗೋಡು ಸರ್ವವನ್ನೂ ಒಳಗೊಳಿಸುವ ಮೂಲಕ ವಿಶಿಷ್ಟವಾಗಿದೆ. ಇದರಿಂದ ಭಾಷೆ-ಭಾಷೆಗಳಲ್ಲಿ ಅನುವಾದ, ಸಂವಹನಗಳಿಗೆ ಹೆಚ್ಚು ಅವಕಾಶವಿರು ವುದು ಭಾಷೆ-ಸಂಸ್ಕೃತಿಯ ಸಂವರ್ಧನೆಗೆ ಪ್ರೇರಕವಾದುದು ಎಂದು ಅವರು ತಿಳಿಸಿದರು. ಶಿವರಾಮ ಕಾರಂತ, ಗೋ ಪಾಲಕೃಷ್ಣ ಅಡಿಗ, ಕೆ.ವಿ.ತಿರುಮಲೇಶ್ ಮೊದಲಾದವರ ಕೃತಿಗಳು ಮಲೆಯಾಳಂ ಗೆ ಭಾಷಾಂತರಗೊAಡು ಸಾಹಿತ್ಯದ ಮೂಲಕ ವಿಸ್ತೃತ ಭಾಷಾ ಬಾಂಧವ್ಯಕ್ಕೆ ಕಾರಣವಾಗಿದೆ ಎಂದವರು ತಿಳಿಸಿದರು.
ಶಾಸಕ ಎಕೆಎಂ ಅಶ್ರಫ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕರ್ನಾಟಕ ಗಡಿಪ್ರದೇಶಾಭಿ ವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು. ಈ ಸಂದರ್ಭ ಡಾ.ಪುರುಷೋತ್ತಮ ಬಿಳಿಮಲೆ ದಂಪತಿಯನ್ನು ಗೌರವಿಸ ಲಾಯಿತು. ಕಲಾವಿದೆ, ಚಿತ್ರನಿರ್ದೇಶಕಿ ನಿರ್ಮಲಾ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಗಿಳಿವಿಂಡು ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್ ಸ್ವಾಗತಿಸಿದರು. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ನಿರೂಪಿಸಿದರು. ಪುರುಷೋತ್ತಮ ಭಟ್.ಕೆ. ವಂದಿಸಿದರು.
ಬಳಿಕ ರಾಧಾಕೃಷ್ಣ ಕೆ,ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಆಶಯ ನುಡಿಗಳನ್ನಾಡಿದರು. ಪುರು ಷೋತ್ತಮ ಭಟ್ ಕೆ. ನಿರ್ವಹಿಸಿದರು. ಸಂವಾದದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೆ.ರಮಾನಂದ ಬನಾರಿ ಹಾಗೂ ಕೆ.ವಿ.ಕುಮಾರನ್ ಪಾಲ್ಗೊಂಡರು. ಜಿ.ಎನ್.ಮೋಹನ್ ಸಮನ್ವಯಕಾರರಾಗಿ ದ್ದರು. ಅಪರಾಹ್ನ ನಡೆದ ಎರಡನೇ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷ ಪುತ್ರಕಳ ಆಶಯ ನುಡಿಗಳನ್ನಾಡಿದರು. ವನಿತಾ ಆರ್.ಶೆಟ್ಟಿ ನಿರ್ವಹಿಸಿದರು. ದಿವಾಕರ ಪಿ.ಅಶೋಕ ನಗರ ತಂಡದವರಿAದ ಭಾವ-ಜಾನಪದ-ಗೀತ ಗಾಯನ ನಡೆಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಸಮಾರೋಪ ನುಡಿಗಳನ್ನಾಡಿದರು. ಡಾ. ಪುರು ಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು. ಮಂಜೇಶ್ವರ ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಿವಶಂಕರ್ ಮುಖ್ಯ ಅತಿಥಿಗಳಾಗಿದ್ದರು. ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಡಾ.ಎಚ್.ಆರ್.ಸ್ವಾಮಿ, ಡಾ.ಪದ್ಮಾ ಶೈಲೇಂದ್ರ ಬಂದಗದ್ದೆ, ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಮೇಶ ಎಂ.ಸಾಲಿಯಾನ್ ಉಪಸ್ಥಿತರಿದ್ದರು. ಕಮಲಾಕ್ಷ ಡಿ.ಸ್ವಾಗತಿಸಿ, ಕಮಲಾಕ್ಷ ಕನಿಲ ವಂದಿಸಿದರು. ಸಂತೋಷ್ ಕುಮಾರ್ ಕೆ. ನಿರೂಪಿಸಿದರು. ಗಿಳಿವಿಂಡು ಪರಿಸರದಿಂದ ದೀವಟಿಗೆ ಮೆರವಣಿಗೆ ಹೊರಟಿತು.
