ಕಾಸರಗೋಡು: ಬದುಕಿಗೆ ಕೈ ಹಿಡಿದು ಮುನ್ನಡೆಸಲು ನಾಡಿನ ಜನರು ಒಂದಾಗಿಯೂ ಫಲಪ್ರಾಪ್ತಿ ಉಂಟಾಗಿಲ್ಲ. ಕಾಲ್ಚೆಂಡು ಆಟಗಾರನಾಗಿದ್ದ ವಲಿಯಪ ರಂಬ್ ನಿವಾಸಿ ಟಿ.ಕೆ. ಅನಿಲ್ ಕುಮಾರ್ (54) ಕೊನೆಗೂ ನಿಧನ ಹೊಂದಿದರು. ಕ್ಯಾನ್ಸರ್ ತಗಲಿ ಅನಿಲ್ ಕುಮಾರ್ ಚಿಕಿತ್ಸೆಯಲ್ಲಿದ್ದು, ಇವರ ಚಿಕಿತ್ಸೆಯ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ಸ್ಥಳೀಯರ ನೇತೃತ್ವದಲ್ಲಿ ಚಿಕಿತ್ಸಾ ಸಹಾಯಸಮಿತಿ ರೂಪೀಕರಿಸಲಾ ಯಿತು. ನಿನ್ನೆ ಮರಣ ಸಂಭವಿಸಿದೆ. ವಲಿಯಪರಂಬ್ ಕೆಜಿಎಂ ಸ್ಪೋರ್ಟ್ಸ್ ಕ್ಲಬ್‌ನ ಉತ್ತಮ ಕಾಲ್ಚೆಂಡು ಆಟಗಾರನಾಗಿ ದ್ದರು. ಕ್ಲಬ್‌ನ ಕಾರ್ಯದರ್ಶಿಯಾಗಿದ್ದರು.
ರಾಜ್ಯ ರೆಫರೀಸ್ ಬೋರ್ಡ್ ಸದಸ್ಯನಾಗಿಯೂ ದುಡಿದಿದ್ದರು. ಬಳಿಕ ಆಟೋ ರಿಕ್ಷಾ ಕಾರ್ಮಿಕನಾಗಿದ್ದು, ಕಾರ್ಮಿಕರ ಯೂನಿಯನ್ ವಲಿಯಪ ರಂಬ್ ಘಟಕ ಕಾರ್ಯದರ್ಶಿಯಾಗಿದ್ದರು. ಕೆ.ಕೆ. ಕುಮಾರನ್- ಟಿ.ಕೆ. ಮಾಧವಿ ದಂಪತಿ ಪುತ್ರನಾದ ಮೃತರು ಪತ್ನಿ ಪಿ.ವಿ. ಸುನಿತ, ಪುತ್ರ ಅಭಿಜಿತ್, ಸಹೋದರರಾದ ಟಿ.ಕೆ. ಮುರಳಿ, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.