ಕಾಸರಗೋಡಿಗೂ ಬಂದಿದ್ದ ಐಸಿಸ್ ಉಗ್ರ ಶಹನವಾಸ್ ಬಾಂಬ್ ಸ್ಫೋಟಕ್ಕೆ ಯೋಜನೆ ಹಾಕಿದ್ದ
ನವದೆಹಲಿ: ರಾಜಸ್ಥಾನದಿಂದ ನಿನ್ನೆ ಬಂಧಿತನಾದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಶಹನವಾಸ್ ಅಲಿಯಾಸ್ ಶಾಫಿ ಉಸಾಮ ಈ ಹಿಂದೆ ತನ್ನ ಸಹಚರರೊಂದಿಗೆ ಉಡುಪಿ ಮೂಲಕ ಕಾಸರಗೋಡು ಮತ್ತು ಕಣ್ಣೂರಿಗೂ ಸಂದರ್ಶಿಸಿದ್ದನು. ಮಾತ್ರವಲ್ಲ ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ತಮ್ಮ ಸಂಘಟನೆಯ ಐಸಿಸ್ ಧ್ವಜವನ್ನು ಸ್ಥಾಪಿಸಿ ಅಲ್ಲಿಂದ ಹಲವು ಫೋ ಟೋಗಳನ್ನು ತೆಗೆದಿದ್ದನೆಂದು ಎನ್‌ಐಎ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಫೋಟೋಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ. ಮಾತ್ರವಲ್ಲ ಆತ ಕೇರಳದಲ್ಲೂ ಬಾಂಬ್ ಸ್ಫೋಟ ನಡೆಸಲು ಯೋಜನೆ ಹಾಕಿದ್ದನೆಂಬ ಕಳವಳಕಾರಿ ಮಾಹಿತಿಯನ್ನು ತನಿಖಾ ತಂಡ ಬಹಿರಂಗಪಡಿಸಿದೆ.
ಬಂಧಿತ ಉಗ್ರ ಮತ್ತು ಆತನ ಸಹಚರರು ಅಯೋಧ್ಯೆಯ ರಾಮ ಮಂದಿರ, ಮುಂಬಯಿಯ ಚಬಾದ್ ಹೌಸ್ ಸೇರಿದಂತೆ ೧೮ ಸ್ಥಳಗಳಲ್ಲೂ ಸ್ಫೋಟ ಹಾಗೂ ಗಣ್ಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿಗೂ ಸಂಚು ರೂಪಿಸಿದ್ದರ ಎಂಬುವುದನ್ನು ತನಿಖೆ ವೇಳೆ ಅವರು ಬಾಯ್ಬಿಟ್ಟಿರುವುದಾಗಿ ಎನ್‌ಐಎ ತಿಳಿಸಿದೆ.
ಶಹನವಾಸ್‌ನನ್ನು ನಿನ್ನೆ ರಾಜಸ್ಥಾನದ ಜೈಪುರದಿಂದಲೂ, ಆತನ ಸಹಚರರಾದ ರಿಸ್ವಾನ್ ಅಶ್ರಫ್‌ನನ್ನು ಲಕ್ನೋದಿಂದಲೂ ಹಾಗೂ ಮೊಹಮ್ಮದ್ ಅರ್ಷಾದ್ ವಾರ್ಸಿಯನ್ನು ಉತ್ತರಪ್ರದೇಶದ ಮೊರದಾಬಾದ್‌ನಿಂದ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಆ ಮೂಲಕ ಅವರು ಹೂಡಿದ್ದ ಸಂಚುಗಳೆಲ್ಲವನ್ನೂ ವಿಫಲಗೊಳಿಸಿ ದ್ದಾರೆ. ಆಘಾತಕಾರಿ ಮಾಹಿತಿಯೆಂದರೆ ಬಂಧಿತರಾದ ಈ ಮೂವರು ಉಗ್ರರು ಇಂಜಿನಿಯ ರಿಂಗ್ ಪದವೀ ಧರರಾಗಿದ್ದಾರೆ. ಶಹನವಾಸ್‌ನ ಅಡಗುತಾಣದಿಂದ ಐಐಡಿ ತಯಾರಿಸುವ ವಸ್ತುಗಳು ಪಾಕಿಸ್ತಾನ ನಿರ್ಮಿತ ಪಿಸ್ತೂಲುಗಳು, ಬಾಂಬ್ ತಯಾರಿಸುವ ರಾಸಾಯನಿಕ ವಸ್ತು ಮತ್ತು ಜಿಹಾದಿ ಸಾಹಿತ್ಯವನ್ನೂ ತನಿಖಾತಂಡ ಪತ್ತೆಹಚ್ಚಿ ವಶಪಡಿ ಸಿಕೊಂಡಿದ್ದಾರೆ. ೨೬/೧೧ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕಿಂತಲೂ ಅತ್ಯುಘ್ರ ದಾಳಿ ನಡೆಸಲು ಈ ಉಗ್ರರು ಸಂಚು ಹೂಡಿದ್ದರು. ಅದಕ್ಕಾಗಿ ಅಗತ್ಯದ ತರಬೇತಿಯನ್ನೂ ಅವರು ಐಸಿಸ್‌ನಿಂದ ಪಡೆದು ಕೊಂಡಿದ್ದರು.
ಉಗ್ರ ಶಹನವಾಸ್ ಚಾಟ್ ಅಪ್ಲಿಕೇಶನ್ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳನ್ನು ಪದೇ ಪದೇ ಸಂಪರ್ಕಿಸುತ್ತಿದ್ದ. ಮಾತ್ರವಲ್ಲ ಆತ ಫೋನ್ ಕರೆದ (ಸಿಡಿಆರ್) ಪರಿಶೀಲಿಸಿದಾಗ ಆ ಕುರಿತಾದ ಹಲವು ಮಾಹಿತಿಗಳು ಎನ್‌ಐಎಗೆ ಲಭಿಸಿದೆ.