ಕಾಸರಗೋಡು ಕ್ಷೇತ್ರಕ್ಕಾಗಿ ಲೀಗ್ನಿಂದ ಒತ್ತಡ: ಉಭಯ ಪಕ್ಷಗಳ ಸಭೆ ಇಂದು
ತಿರುವನಂತಪುರ: ಕಾಸರಗೋಡು ಲೋಕಸಭಾ ಕ್ಷೇತ್ರ ಲಭಿಸಬೇಕೆಂಬ ಬೇಡಿಕೆ ಮುಸ್ಲಿಂ ಲೀಗ್ ತೀವ್ರಗೊಳಿಸು ತ್ತಿದೆ. ಇಂದು ನಡೆಯುವ ಕಾಂಗ್ರೆಸ್ ಲೀಗ್ ನಾಯಕತ್ವ ಮಟ್ಟದ ಉಭಯ ಪಕ್ಷಗಳ ಚರ್ಚೆಯಲ್ಲಿ ಈ ಬೇಡಿಕೆ ಯನ್ನು ಮುಂದಿ ರಿಸಬಹುದೆಂಬ ಸೂಚನೆ ಯಿದೆ. ಮೊನ್ನೆ ನಡೆಯಬೇಕಾಗಿದ್ದ ಚರ್ಚೆ ರಮೇಶ್ ಚೆನ್ನಿತ್ತಲರಿಗೆ ತುರ್ತಾ ಗಿ ಮಹಾರಾಷ್ಟ್ರಕ್ಕೆ ತೆರಳಬೇಕಾದ ಹಿನ್ನೆಲೆಯಲ್ಲಿ ಇಂದಿಗೆ ಬದಲಿಸಲಾಗಿದೆ.
ಹಲವು ವರ್ಷಗಳಿಂದ ಸಿಪಿಎಂ ವಶವಿರಿಸಿಕೊಂಡಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರ ಕಳೆದ ಬಾರಿ ಐಕ್ಯರಂಗ ವಶಪಡಿಸಿತ್ತು. ಕಳೆದ ಬಾರಿ ಗೆಲುವು ಪಡೆದ ಮಂಡಲವನ್ನು ಉಳಿಸಿಕೊಳ್ಳಬೇಕೆಂಬ ತೀರ್ಮಾನ ಲೀಗ್ನಲ್ಲಿದೆ. ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದರೆ ಮಂಡಲ ಕೈತಪ್ಪುವ ಸಾಧ್ಯತೆಯಿದೆ ಎಂದು ಲೀಗ್ ಕೇಂದ್ರಗಳು ಮುನ್ನೆಚ್ಚರಿಕೆ ನೀಡುತ್ತಿವೆ. ಹಾಲಿ ಸಂಸದರೇ ಸ್ಪರ್ಧಿಸಿದರೆ ಸ್ವಂತ ಪಾರ್ಟಿಯ ಜನರೇ ಮತ ನೀಡರೆಂಬ ಆತಂಕ ಕಾಂಗ್ರೆಸ್ನಲ್ಲೂ ಇದೆಯೆಂದು ಮುಖಂಡರು ಪರೋಕ್ಷವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಮಂಡಲಕ್ಕಾಗಿ ಚದುರಂ ಗದಾಟ ಆರಂಭಿಸಿದೆ. ಇದೇ ವೇಳೆ ಎಡರಂಗದ ಅಭ್ಯರ್ಥಿಯಾಗಿ ವಿವಿಪಿ ಮುಸ್ತಫರನ್ನು ರಂಗಕ್ಕೆ ಇಳಿಸುವರೆಂಬ ಸೂಚನೆ ಕಂಡುಬರುತ್ತಿದೆ.