ಕಾಸರಗೋಡು ಮೆಡಿಕಲ್ ಕಾಲೇಜು ಎರಡು ವರ್ಷದೊಳಗೆ ಕಾರ್ಯಾರಂಭ-ಸಚಿವೆ

ತಿರುವನಂತಪುರ: ಕಾಸರಗೋಡು ಮೆಡಿಕಲ್ ಕಾಲೇಜಿನ ಚಟುವಟಿಕೆ ಎರಡು ವರ್ಷದೊಳಗೆ ಆರಂಭಿಸುವ ಗುರಿಯಿರಿಸಲಾಗಿ ದೆಯೆಂದು ಸಚಿವೆ ವೀಣಾ ಜೋರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ೫೦ ಸೀಟುಗಳೊಂದಿಗೆ ಎಂ.ಬಿ.ಬಿ.ಎಸ್ ಕೋರ್ಸ್ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಎರಡು ವರ್ಷಗಳಿಂದ ಕಾರ್ಯಾಚರಿಸುವ ಆಸ್ಪತ್ರೆ ಬೇಕೆಂದು ರಾಷ್ಟ್ರೀಯ ಮೆಡಿಕಲ್ ಕಮಿಶನ್‌ನ ನಿಬಂಧನೆ ಯಾಗಿದೆ. ಆಸ್ಪತ್ರೆ ಕಟ್ಟಡ ಪೂರ್ತಿಗೊಳಿ ಸಲು ಕಿಫ್‌ಬಿ ೧೬೦ ಕೋಟಿ ರೂಪಾಯಿ ಮಂಜೂರು ಮಾಡಿದೆ. ಅಕಾಡೆಮಿಕ್ ಬ್ಲಾಕ್ ಪೂರ್ಣಗೊಂ ಡಿದೆ. ಹಾಸ್ಟೆಲ್ ಕಟ್ಟಡಗಳ ಸಹಿತ ೭೫ ಶೇ. ಪೂರ್ತಿಯಾಗಿದೆ. ೨೭೩ ಅಧ್ಯಾಪಕ, ಅನಧ್ಯಾಪಕ ಹುದ್ದೆ ಗಳನ್ನು ಸೃಷ್ಟಿಸಲಾಗಿದೆ. ಆಸ್ಪತ್ರೆಗಾಗಿ ಕೇಂದ್ರದ ಸಹಾಯ ಆಗ್ರಹಪಟ್ಟರೂ ಲಭಿಸಿಲ್ಲವೆಂದೂ ಸಚಿವೆ ತಿಳಿಸಿದರು. ಕಾಸರಗೋಡಿನ ಆರೋಗ್ಯ ವಲಯಗಳ ಸಮಸ್ಯೆ ಪರಿಹರಿಸಲಾ ಗುವುದು. ಉದುಮದಲ್ಲಿ ಸ್ಪೆಶಾಲಿಟಿ ಆಸ್ಪತ್ರೆಗೆ ಡಿ.ಪಿ.ಆರ್ ಸಿದ್ಧಪಡಿಸಿರುವು ದಾಗಿ ಸಚಿವೆ ತಿಳಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವೆ ಈ ರೀತಿ ತಿಳಿಸಿದ್ದಾರೆ.

RELATED NEWS

You cannot copy contents of this page