ಕಾಸರಗೋಡು ರೈಲುಗಾಡಿ ಬುಡಮೇಲು ಯತ್ನ: ರೈಲ್ವೇ ಪೊಲೀಸರಿಂದ ಪರಿಶೀಲನೆ
ಕಾಸರಗೋಡು: ಪಳ್ಳಂ ರೈಲ್ವೇ ಹಳಿಯಲ್ಲಿ ರೈಲನ್ನು ಬುಡಮೇಲುಗೊಳಿ ಸಲು ಯತ್ನಿಸಿದ ಘಟನೆಯಲ್ಲಿ ರೈಲ್ವೇ ಪೊಲೀಸರು ಸ್ಥಳ ಸಂದರ್ಶಿಸಿದರು. ಪಾಲಕ್ಕಾಡ್ ಡಿವೈಎಸ್ಪಿ ಸಂತೋಷ್ ಕುಮಾರ್, ಕಲ್ಲಿಕೋಟೆ ಸಿಐ ಸುಧೀರ್ ಮನೋಹರ್, ಕಾಸರಗೋಡು ರೈಲ್ವೇ ಎಸ್ಐ ಎಂ.ವಿ. ಪ್ರಕಾಶನ್ ಎಂಬಿವರು ಸ್ಥಳ ಸಂದರ್ಶಿಸಿದರು. ಸ್ಟೇಷನ್ ಮಾಸ್ಟರ್ರ ದೂರಿನಂತೆ ಟೌನ್ ಪೊಲೀಸ್ ಕೇಸು ದಾಖಲಿಸಿ ತನಿಖೆ ಆರಂಭಿಸಿದೆ. ಇಲ್ಲಿ ಈ ಮೊದಲು ರೈಲನ್ನು ಹಳಿ ತಪ್ಪಿಸಲು ಯತ್ನ ನಡೆ ದಿದ್ದು, ಈ ಬಾರಿಯ ಯತ್ನವನ್ನು ರೈಲ್ವೇ ಗಂಭೀರವಾಗಿ ಪರಿಗಣಿಸಿದೆ. ಇಲ್ಲಿ ಕ್ಯಾಮರಾ ಸ್ಥಾಪಿಸಲು ಚಿಂತಿಸಲಾಗುತ್ತಿದೆ. ಪರಿಸರ ಪ್ರದೇಶದ ಸಿಸಿ ಟಿವಿ ಕ್ಯಾಮರಾ ಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿ ಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಹಳಿಯಲ್ಲಿ ಪ್ಲಾಸ್ಟಿಕ್ ಬಾಟ್ಲಿ, ನಾಣ್ಯಗಳನ್ನು ಪತ್ತೆಹಚ್ಚಲಾಗಿತ್ತು.