ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಸವಿತಾ ಪಿ. ನೇಮಕ
ಕಾಸರಗೋಡು: ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಸವಿತಾ ಪಿ ಅವರನ್ನು ನೇಮಿಸಲಾಗಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಿಕೆಯಾಗಿ, ಶಿರಿಯ ಹಾಗೂ ಕಾಸರಗೋಡು ಸರಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಮುಖ್ಯೋಪಾ ಧ್ಯಾಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಕಾಸರಗೋಡು ಬಿಇಎಂ ಹೈಸ್ಕೂಲ್ನ ಹಳೆ ವಿದ್ಯಾರ್ಥಿಯಾದ ಇವರು ಮನ್ನಿ ಪ್ಪಾಡಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಜಕುಮಾರ್ ಮಧೂರು ಅವರ ಪತ್ನಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಮಹಿಳೆ ಯೊಬ್ಬರು ನೇಮಕಗೊಂಡಿದ್ದಾರೆ.