ಕಾಸರಗೋಡು: ಚೈಲ್ಡ್ ಕೇರ್ ಆಂಡ್ ವೆಲ್ಫೇರ್ ಓರ್ಗನೈಸೇಶನ್ ನೇತೃತ್ವದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕುರಿತು ತಿಳುವಳಿಕೆ ತರಗತಿ ನಡೆಸಲಾ ಯಿತು. ಸಿಸಿಡಬ್ಲ್ಯುಒ ರಾಷ್ಟ್ರೀಯ ಆಡಳಿತ ಸಮಿತಿ ಅಧ್ಯಕ್ಷ ಸುನಿಲ್ ಮಳಿ ಕ್ಕಲ್ ಅಧ್ಯಕ್ಷತೆ ವಹಿಸಿದರು. ಕ್ಲಿನಿಕಲ್ ಸೈಕಾಲಜಿಸ್ಟ್ ಗೀತು ರಾಮಚಂದ್ರನ್ ತರಗತಿ ನಡೆಸಿದರು. ಸಿಸಿಡಬ್ಲ್ಯುಒ ಆಡಳಿತ ಸಮಿತಿ ಉಪಾಧ್ಯಕ್ಷ ಉಮ್ಮರ್ ಪಾಡಲಡ್ಕ, ಕಾಲೇಜಿನ ಹಿಸ್ಟರಿ ವಿಭಾಗ ಪ್ರೋಫೆಸರ್ ದೀಪ, ಸೈಕಾಲಜಿಸ್ಟ್ ದೇವಿಕ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯದರ್ಶಿ ಅಂಕಿತ ಸ್ವಾಗತಿಸಿ, ಫಾಜಿಶ ವಂದಿಸಿದರು.
