ಕುಂಟಾರಿನಲ್ಲಿ ವಾಹನ ಅಪಘಾತ: ಓರ್ವ ಮೃತ್ಯು
ಮುಳ್ಳೇರಿಯ: ಕುಂಟಾರಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪ ಘಾತದಲ್ಲಿ ಸುಳ್ಯ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ.
ಸುಳ್ಯ ಬಳಿಯ ಅಜ್ಜಾವರ ಕಳುತ್ತಡ್ಕ ಎಂಬಲ್ಲಿನ ಮುಹಮ್ಮದ್ ಕುಂಞಿ (65) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಓಮ್ನಿ ವ್ಯಾನ್ ಹಾಗೂ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಮುಹ ಮ್ಮದ್ ಕುಂಞಿ ಓಮ್ನಿ ವ್ಯಾನ್ನಲ್ಲಿ ಕಾಸರಗೋಡಿನಿಂದ ಸುಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯ ಗೊಂಡ ಮುಹಮ್ಮದ್ ಕುಂಞಿ ಯನ್ನು ಕೂಡಲೇ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.