ಕುಂಬಳೆ ಉಪಜಿಲ್ಲಾ ಮಟ್ಟದ ಪ್ರವೇಶೋತ್ಸವ ಜಿಎಸ್‌ಬಿಎಸ್‌ನಲ್ಲಿ 3ರಂದು

ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ಪ್ರವೇಶೋತ್ಸವವನ್ನು ಜೂ.3ರಂದು ಬೆಳಗ್ಗೆ 10 ಗಂಟೆಗೆ ಜಿಎಸ್ ಬಿಎಸ್ ಕುಂಬಳೆಯಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ನಿನ್ನೆ ನಡೆದ ಸಮÁಲೆÆÃಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸÀÄವರು. ಕುಂಬಳೆ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಲಿದ್ದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಸೀಮಾ ಖಾಲಿದ್, ಪಂ. ಸದಸ್ಯೆ ಪ್ರೇಮಾವತಿ ಉಪಸ್ಥಿತರಿರುವರು.
ಈ ಬಗ್ಗೆ ನಡೆದ ಸಭೆಯನ್ನು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎ. ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಬೆಂಜಮಿನ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಬಿಪಿಸಿ ಜಯರಾಂ, ಪಿಇಸಿ ಕಾರ್ಯದರ್ಶಿ ಶ್ರೀಹರ್ಷ ಬಲ್ಲಾಳ್, ಶಾಲಾ ಎಸ್‌ಎಂಸಿ ಅಧ್ಯಕ್ಷ ಖಾದರ್ ಉಳು ವಾರ್ ಮಾತನಾಡಿದರು. ಮುಖ್ಯ ಶಿಕ್ಷಕ ವಿಜಯಕುಮಾರ್ ಪಾವಲ ಸ್ವಾಗತಿಸಿ, ಎಸ್‌ಆರ್‌ಜಿ ಸಂಚಾಲಕಿ ಪ್ರಸೂತಿ ಟೀಚರ್ ವಂದಿಸಿದರು.

You cannot copy contents of this page