ಕುಂಬಳೆ ಪಂ.ನಲ್ಲಿ ಆಡಳಿತ ನಡೆಸುವುದು ಲೀಗ್ ಸದಸ್ಯೆಯರ ಪತಿಯಂದಿರು-ಸಿಪಿಎಂ
ಕುಂಬಳೆ: ಕುಂಬಳೆ ಪಂಚಾಯ ತ್‌ನಲ್ಲಿ ಆಡಳಿತ ನಡೆಸುತ್ತಿರುವುದು ವಂಚನಾ ತಂಡವಾಗಿದೆಯೆಂದೂ ಆಡಳಿತಕ್ಕೆ ಚುಕ್ಕಾಣಿ ಹಿಡಿಯುತ್ತಿ ರುವುದು ಲೀಗ್‌ನ ಮಹಿಳಾ ಸದಸ್ಯೆಯರ ಪತಿಯರಾಗಿದ್ದಾರೆಂದು ಸಿಪಿಎಂ ಲೋಕಲ್ ಸಮಿತಿ ಆರೋಪಿಸಿದೆ.
ಕುಂಬಳೆ ಪೇಟೆಯಲ್ಲಿ ೩೯ ಲಕ್ಷ ರೂಪಾಯಿ ವ್ಯಯಿಸಿ ಬಸ್ ವೈಟಿಂಗ್ ಶೆಡ್ ನಿರ್ಮಿಸಿರುವುದು ಹಾಗೂ 40 ಲಕ್ಷ ರೂ. ವ್ಯಯಿಸಿ ‘ಟೇಕ್ ಎ ಬ್ರೇಕ್’ ನಿರ್ಮಿಸಿರವುದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆಯೆಂದೂ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಲೋಕಲ್ ಸಮಿತಿ ಒತ್ತಾಯಿಸಿದೆ. ಇದೇ ಬೇಡಿಕೆ ಮುಂದಿರಿಸಿ ಸ್ಥಳೀಯಾಡಳಿತ ಖಾತೆ ಸಚಿವ, ಜಿಲ್ಲಾಧಿಕಾರಿ, ಪಂಚಾಯತ್ ಕಾರ್ಯದರ್ಶಿ ಎಂಬಿವರಿಗೆ ಪಕ್ಷ ಮನವಿ ಸಲ್ಲಿಸಿದೆ. ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಪರಿಶೀಲನೆ ಬಳಿಕವೇ ಪಂಚಾಯತ್ ಫಂಡ್ ಹಸ್ತಾಂತರಿಸಬಹುದಾ ಗಿದೆಯೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಬಿಲ್‌ಗೆ ತಡೆಯೊಡ್ಡಲಾಗಿದೆ. ಆದರೆ ತಡೆಹಿಡಿದ ಫಂಡ್ ಕಾನೂನು ಕ್ರಮ ಪಾಲಿಸದೆ ಕೂಡಲೇ ನೀಡಬೇಕೆಂದು ಒತ್ತಾಯಿಸಿ ಪಂಚಾಯತ್ ಕಚೇರಿಗೆ ತಲುಪಿದ ಗುತ್ತಿಗೆದಾರನು ಪಂಚಾಯತ್ ಅಧ್ಯಕ್ಷೆಯ ಪತಿಯಾದ ಲೀಗ್ ನೇತಾರ ಪಂಚಾಯತ್ ಕಾರ್ಯದರ್ಶಿಗೆ ಬೆದರಿಕೆಯೊಡ್ಡಿ ಗದ್ದಲ ಸೃಷ್ಟಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪಂಚಾಯತ್ ಆಡಳಿತ ಮರೆಯಲ್ಲಿ ಆಡಳಿತ ಪಕ್ಷದ ಕೆಲವು ಸಾರ್ವಜನಿಕ ಸೊತ್ತುಗಳನ್ನು ಕಬಳಿಸುತ್ತಿದ್ದಾರೆಂದೂ ಸಿಪಿಎಂ ಆರೋಪಿಸಿದೆ. ಬಂದರು ಇಲಾಖೆಯ ಹೊಯ್ಗೆ ಕಡವು ಕೊಳ್ಳೆಹೊಡೆದು ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವುದು ಮುಸ್ಲಿಂ ಲೀಗ್‌ನೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಅದು ಇನ್ನಷ್ಟು ಬಿರುಕಿಗೆ ಕಾರಣವಾಗಲಿದೆಯೆಂದೂ ಸಿಪಿಎಂ ತಿಳಿಸಿದೆ.