ಕುಂಬಳೆ ಪಂ. ಲೀಗ್ ಅಧ್ಯಕ್ಷ, ಕಾರ್ಯದರ್ಶಿ, ಯೂತ್ ಲೀಗ್ ಅಧ್ಯಕ್ಷರ ಅಮಾನತು
ಕಲ್ಲಿಕೋಟೆ: ಮುಸ್ಲಿಂ ಲೀಗ್ ಕುಂಬಳೆ ಪಂಚಾಯತ್ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಕಾರ್ಯ ದರ್ಶಿ ಕೆ.ವಿ.ಯೂಸಫ್, ಯೂತ್ ಲೀಗ್ ಪಂಚಾಯತ್ ಅಧ್ಯಕ್ಷ ಕೆ.ಎಂ. ಅಬ್ಬಾಸ್ ಎಂಬಿವರನ್ನು ಪಕ್ಷದ ಹುದ್ದೆಗಳಿಂದ ಹೊರಹಾಕಿರುವುದಾಗಿ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ತಿಳಿಸಿದ್ದಾರೆ.
ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ಕಾರ್ಳೆ, ಕುಂಬಳೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಯೂಸಫ್ ಉಳುವಾರು ಎಂಬಿವರಿಗೆ ಪಕ್ಷ ತಾಕೀತು ನೀಡಿದೆ. ಮುಸ್ಲಿಂ ಲೀಗ್ ಹಾಗೂ ಯೂತ್ ಲೀಗ್ ಪಂಚಾಯತ್ ಸಮಿತಿಗಳನ್ನು ಶೀಘ್ರ ಮರುಸ್ಥಾಪಿಸಲು ರಾಜ್ಯ ಸಮಿತಿ ಜಿಲ್ಲಾ ಸಮಿತಿಗೆ ನಿರ್ದೇಶಿಸಿದೆ. ಶಿರಿಯಾ ಕಡವಿನ ಹೊಯ್ಗೆ ವ್ಯಾಪಾರಕ್ಕೆ ಸಬಂಧಿಸಿದ ವಿವಾದ ಹಾಗೂ ಅದರಲ್ಲಿ ಲೀಗ್ ನೇತಾರರ ವರ್ತನೆಯೇ ಸ್ಥಿತಿಗೆ ಕಾರಣವಾಗಿ ಯೆಂದು ಹೇಳಲಾಗುತ್ತಿದೆ.