ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಬಿಜೆಪಿ ಅವಿಶ್ವಾಸ ಗೊತ್ತುವಳಿ ಚುನಾವಣೆ ಲಕ್ಷ್ಯವಿರಿಸಿದ ರಾಜಕೀಯ ನಾಟಕ- ಆಡಳಿತ ಸಮಿತಿ

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಇನ್ನು ಕೇವಲ ಕೆಲವೇ ತಿಂಗಳುಗಳು ಉಳಿದಿರುವಂತೆ ಕುಂಬಳೆ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ಗೊತ್ತುವಳಿಯೊಂದಿಗೆ ಬಿಜೆಪಿ ಸದಸ್ಯರು ರಂಗಕ್ಕಿಳಿದಿರುವುದು ರಾಜಕೀಯ ಗೂಢಾಲೋಚನೆಯಾಗಿದೆ ಎಂದು ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಇಲಾಖೆ ಮಟ್ಟದ ಶಿಸ್ತು ಕ್ರಮಕ್ಕೆ ಒಳಗಾಗಿ ಕುಂಬಳೆ ಪಂಚಾ ಯತ್‌ನಲ್ಲಿ ಹೊಣೆ ವಹಿಸಿಕೊಂಡ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡರು ಒಟ್ಟುಗೂಡಿ ನಡೆಸಿದ ಗೂಢಾಲೋಚನೆಯಾಗಿದೆ ಇದು. ಪಂಚಾಯತ್‌ನ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರಿಗಳೆಂದು ಮುದ್ರೆ ಒತ್ತಲು ಯೋಜನೆ ಚಟುವಟಿಕೆ ಗಳನ್ನು ಬುಡಮೇಲುಗೊಳಿಸಿರುವುದರ ಹಿಂದೆ ಕಾರ್ಯದರ್ಶಿಗೆ ಸ್ಪಷ್ಟವಾದ ಪಾಲು ಇದೆ ಎಂದು ಅವರು ಆರೋಪಿಸಿದರು.

ಪಂಚಾಯತ್‌ನಲ್ಲಿ ವರ್ಷಕ್ಕೆ ೪೦೦ರಷ್ಟು ಯೋಜನೆಗಳಿಗೆ ರೂಪು ನೀಡಲಾಗುತ್ತಿದೆ. ಇದರಲ್ಲಿ ೩೦೦ ಲೋಕೋಪಯೋಗಿ ಯೋಜನೆಗಳಾ ಗಿವೆ. ಇದನ್ನು ಜ್ಯಾರಿಗೊಳಿಸುವುದಕ್ಕೆ ಅಗತ್ಯದ ಅಧಿಕಾರಿಗಳಿಲ್ಲ. ನೌಕರರ ಅಪರಿಮಿತ ಒತ್ತಡದಿಂದ ವಾರ್ಷಿಕ ಯೋಜನೆಯಲ್ಲಿ ಅರ್ಧದಷ್ಟು ಕೂಡಾ ನಿರ್ವಹಿಸಲು ಸಾಧ್ಯವಾಗದ ಸನ್ನಿವೇಶ ವಿದೆ. ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರ ಗಳಿಸಿದ ಬಳಿಕ ಬಸ್ ತಂಗುದಾಣ ನಿರ್ಮಾಣಕ್ಕೆ ಆಡಳಿತ ಸಮಿತಿಯಲ್ಲಿ ತೀರ್ಮಾನ ತೆಗೆಯಲಾ ಗಿದೆ. ಇದರ ಆಧಾರದಲ್ಲಿ ಹ್ಯಾಬಿಟೇಟ್ ಟೆಕ್ನೋಲಜಿ ಗ್ರೂಪ್‌ಗೆ ಕಾಮಗಾರಿ ಯನ್ನು ವಹಿಸಿಕೊಡಲಾಗಿತ್ತು. ಕುಂಬಳೆ- ಬದಿಯಡ್ಕ ರಸ್ತೆ ಕೆಎಸ್‌ಟಿಪಿ ರಸ್ತೆಯಾದ ಕಾರಣ ಅವರ ಒಪ್ಪಿಗೆ ಪಡೆದು ಪಂಚಾಯತ್ ಕಾರ್ಯದರ್ಶಿ ಎಗ್ರಿಮೆಂಟ್ ಇಟ್ಟಿದ್ದರು. ಒಂದು ಕೋಟಿ ರೂ.ಗಿಂತ ಕೆಳಗಿನ ಲೋಕೋಪಯೋಗಿ ಕಾಮಗಾರಿ ಹ್ಯಾಬಿಟೇಟ್‌ಗೆ ನೇರವಾಗಿ ನೀಡಬಹುದೆಂದು ಸರಕಾರದ ಆದೇಶವಿದೆ. ಈ ಹಿಂದಿನ ಕಾರ್ಯ ದರ್ಶಿ ಎಲ್ಲಾ ಕ್ರಮಗಳನ್ನು ಪಾಲಿಸಿ ನಿರ್ವಹಣೆ ಹೊಣೆಗಾರಿಕೆಯನ್ನು ಹ್ಯಾಬಿಟೇಟ್‌ಗೆ ನೀಡಿದ್ದಾರೆ. ಇದೇ ರೀತಿಯ ಹಲವು ಕಾಮಗಾರಿಗಳನ್ನು ಇವರಿಗೆ ವಹಿಸಿಕೊಡಲಾಗಿದೆ.

ಜಿಲ್ಲಾ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣ ಹ್ಯಾಬಿಟೇಟ್ ಮೂಲಕ ಜ್ಯಾರಿಗೊಳಿಸಲಾಗಿದೆ. ಕಾಮಗಾರಿಯಲ್ಲಿ ಲೋಪದೋಷ ವಿದ್ದರೆ, ಭ್ರಷ್ಟಾಚಾರವಿದ್ದರೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ, ವಿಜಿಲೆನ್ಸ್ ಡೈರೆಕ್ಟರ್‌ಗೆ ಅಧ್ಯಕ್ಷೆ ದೂರು ನೀಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರವಿದ್ದರೆ ಕಾರ್ಯದರ್ಶಿ ದೂರು ನೀಡದಿರಲು ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಕೆಎಸ್‌ಟಿಪಿ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದ ಕಾರಣ ಇದರ ಮಾಹಿತಿ ಪಂಚಾಯತ್‌ಗೆ ಈ ಎರಡು ವಿಭಾಗಗಳು ನೀಡದ ಕಾರಣ ಆಗಾಗ ಡಿಸೈನ್ ಹಾಗೂ ಅಲೈನ್‌ಮೆಂಟ್‌ಗಳಲ್ಲಿ ಬದಲಾವಣೆ ತಂದಿರುವುದು ಬಸ್ ಶೆಲ್ಟರ್, ಶಾಪಿಂಗ್ ಕಾಂಪ್ಲೆಕ್ಸ್ ಕಾಮಗಾರಿಗಳು ವಿಳಂಬಗೊಳ್ಳಲು ಕಾರಣವಾಗಿರುವುದು. ಸತ್ಯ ಇದಾಗಿರುವಾಗ ಕಾರ್ಯದರ್ಶಿ ಹಾಗೂ ಬಿಜೆಪಿ ಸದಸ್ಯರು ಗೂಢಾ ಲೋಚನೆ ನಡೆಸಿ ಅವಿಶ್ವಾಸ ಠರಾವು ಮಂಡಿಸಿದರೆ ಅದನ್ನು ಎದುರಿಸುವು ದಾಗಿಯೂ ಸತ್ಯಾವಸ್ಥೆ ಆಡಳಿತ ಸಮಿತಿ ಮುಂದೆ ಹಾಗೂ ಸಾರ್ವ ಜನಿಕರಿಗೆ ತಿಳಿಯಪಡಿಸಲಿರುವ ಅವ ಕಾಶವಾಗಿ ಇದನ್ನು ಕಾಣುವು ದಾಗಿಯೂ ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಬಿ.ಎ. ರಹ್ಮಾನ್ ಆರಿಕ್ಕಾಡಿ, ನಸೀಮಾ ಖಾಲಿದ್ ಭಾಗವಹಿಸಿದರು.

You cannot copy contents of this page